ಕರ್ನಾಟಕ

karnataka

ಮಾರ್ಚ್ 3 ರಂದು ಕನಕದುರ್ಗಮ್ಮ ಸಿಡಿಬಂಡಿ ಉತ್ಸವ

ಮಾರ್ಚ್​ 3ರಂದು ಗಡಿನಾಡು ಬಳ್ಳಾರಿಯಲ್ಲಿ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ ನಡೆಯಲಿದ್ದು, ಉತ್ಸವ ಸಿದ್ಧತೆಗಳು ಭರದಿಂದ ಸಾಗಿವೆ.

By

Published : Feb 22, 2020, 11:08 PM IST

Published : Feb 22, 2020, 11:08 PM IST

Updated : Feb 23, 2020, 8:19 AM IST

Kanakadurgamma sidibandi festival, Kanakadurgamma sidibandi festival on March 3, Kanakadurgamma sidibandi festival on March 3 in Bellary, ಕನಕದುರ್ಗಮ್ಮ ಸಿಡಿಬಂಡಿ ಉತ್ಸವ, ಬಳ್ಳಾರಿಯಲ್ಲಿ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ, ಬಳ್ಳಾರಿಯಲ್ಲಿ ಮಾರ್ಚ್​ 3ರಂದು ಕನಕದುರ್ಗಮ್ಮ ಸಿಡಿಬಂಡಿ ಉತ್ಸವ,
ಗಡಿನಾಡು ಬಳ್ಳಾರಿ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ

ಬಳ್ಳಾರಿ: ಮಾರ್ಚ್​ 3ರಂದು ಗಡಿನಾಡು ಬಳ್ಳಾರಿಯಲ್ಲಿ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ ನಡೆಯಲಿದೆ. ಈ ಉತ್ಸವ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ದೇವಸ್ಥಾನದ ಕಾರ್ಯದರ್ಶಿ ಪಿ.ಗಾದೆಪ್ಪ, ಸೋಮವಾರ ಸಂಜೆ ಸಿಡಿಬಂಡಿ ಕನಕದುರ್ಗಮ್ಮ ಗುಡಿ ಮುಂದೆ ನಿಲ್ಲುತ್ತದೆ. ಮಂಗಳವಾರ ಬೆಳಗ್ಗೆ ಸಂಪ್ರದಾಯ ಪದ್ಧತಿಯ ರೂಪದಲ್ಲಿ ಬೆಣ್ಣೆ ಕುಂಬ, ಎತ್ತುಗಳ ಮೆರವಣಿಗೆ ನಡೆಯುತ್ತದೆ. ಅಂದು ಸಂಜೆ 5 ಗಂಟೆಗೆ ಸಿಡಿ ಉತ್ಸವ ಕನಕ ದುರ್ಗಮ್ಮ ದೇವಸ್ಥಾನದ ದೇವಿಯ ಸುತ್ತಲೂ ಮೂರು ಸತ್ತುಗಳ ಪ್ರದರ್ಶನವನ್ನು ಹಾಕಲಾಗುತ್ತದೆ. ಬುಧವಾರ ಸಂಜೆ ಸಿಡಿ ಬಂಡಿ ಮುಕ್ತಾಯವಾಗುತ್ತದೆ ಎಂದು ಹೇಳಿದರು.

ಗಡಿನಾಡು ಬಳ್ಳಾರಿ ಕನಕದುರ್ಗಮ್ಮ ಸಿಡಿಬಂಡಿ ಉತ್ಸವ

ವಿಶೇಷವಾಗಿ ಜಾತ್ರೆಗೆ ಉಚಿತ ಬಸ್​ ವ್ಯವಸ್ಥೆ:ಈ ಬಾರಿ‌ ಸಿಡಿಬಂಡಿ ನೋಡಲು 35 ಉಚಿತ ಬಸ್​ಗಳನ್ನ ಹಳ್ಳಿಗಳಿಂದ ಬಿಡಲಾಗಿದೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಇರುತ್ತವೆ ಎಂದು ತಿಳಿಸಿದರು. 140 ಹಳ್ಳಿಗಳಿಂದ ಬರುವ ಭಕ್ತರಿಗೆ ಅನುಕೂಲಕರವಾಗಿರಲಿ ಎನ್ನುವ ಉದ್ದೇಶವಾಗಿದೆ.

ಜಾನಪದ ಜಾತ್ರೆ:ಈ ಬಾರಿ ಕನಕದುರ್ಗಮ್ಮನ ಸಿಡಿಗೆ ಮಂಗಳವಾರ ಮಧ್ಯಾಹ್ನದಿಂದಲ್ಲೇ ಜಾನಪದ ಜಾತ್ರೆ ಎನ್ನುವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ದೇವಸ್ಥಾನದ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ. ಸಿಡಿ ಉತ್ಸವ ನೋಡಲು ಭಕ್ತರ ಸಂಖ್ಯೆ ಹೆಚ್ಚಾಗಿ ಬರುವುದರಿಂದ 10*10 ಅಡಿಯ 4 ಎಲ್.ಇ‌.ಡಿ ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಪಿ.ಗಾದೆಪ್ಪ ಹೇಳಿದರು.

Last Updated : Feb 23, 2020, 8:19 AM IST

ABOUT THE AUTHOR

...view details