ಕರ್ನಾಟಕ

karnataka

ETV Bharat / state

ಒಂದೊಳ್ಳೆ ಕಾರ್ಯ; 28 ದಿನಗಳಿಂದ ಬಡವರಿಗೆ ಆಹಾರ ಪೂರೈಸುತ್ತಿರುವ ಕಂಪ್ಲಿ ಯುವಕರು.. - ಆಹಾರ ಪೊಟ್ಟಣ ವಿತರಣೆ

28 ದಿನ ಬಿಟ್ಟು ಬಿಡದೇ ಕಂಪ್ಲಿ ಪಟ್ಟಣ ವ್ಯಾಪ್ತಿಯಲ್ಲಿ ನೆಲೆಸಿರುವ ಕಡು ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಮಧ್ಯಾಹ್ನದ ಬಿಸಿ ಬಿಸಿಯಾದ ಅಡುಗೆ ತಯಾರಿಸಿ ಪೊಟ್ಟಣಗಳಲ್ಲಿ ತುಂಬಿಕೊಂಡು ಬೈಕ್​ಗಳಲ್ಲಿ ತೆರಳಿ ಹಂಚುವ ಕಾರ್ಯದಲ್ಲಿ ನಿರತರಾಗಿ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Kampli youth
ಕಂಪ್ಲಿ ಯುವಕರ ಪಡೆ

By

Published : May 3, 2020, 10:19 AM IST

ಬಳ್ಳಾರಿ :ಲಾಕ್​ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಕಂಪ್ಲಿ ಪಟ್ಟಣದ ಹತ್ತಾರು ಯುವಕರ ಪಡೆಯೊಂದು ಸತತ 28 ದಿನಗಳ ಕಾಲ‌ ಪ್ರತೀ ದಿನ ಅಂದಾಜು 2,500 ಆಹಾರ ಪೊಟ್ಟಣಗಳನ್ನ ವಿತರಿಸುವ ಮೂಲಕ ವಿಶೇಷ ಗಮನ ಸೆಳೆದಿದೆ.

ಬಡವರಿಗೆ ಆಹಾರ ಪೂರೈಸುತ್ತಿರುವ ಕಂಪ್ಲಿ ಯುವಕರ ಪಡೆ..

28 ದಿನ ಬಿಟ್ಟು ಬಿಡದೇ ಕಂಪ್ಲಿ ಪಟ್ಟಣ ವ್ಯಾಪ್ತಿಯಲ್ಲಿ ನೆಲೆಸಿರುವ ಕಡು ಬಡವರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಮಧ್ಯಾಹ್ನದ ಬಿಸಿ ಬಿಸಿಯಾದ ಅಡುಗೆ ತಯಾರಿಸಿ ಪೊಟ್ಟಣಗಳಲ್ಲಿ ತುಂಬಿಕೊಂಡು ಬೈಕ್​ಗಳಲ್ಲಿ ತೆರಳಿ ಹಂಚುವ ಕಾರ್ಯದಲ್ಲಿ ನಿರತರಾಗಿ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಂಪ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಏಪ್ರಿಲ್ 5ರಿಂದ ದಿನ ₹12,000 ವ್ಯಯಿಸಿ ಹತ್ತಾರು ಯುವಕರ ಪಡೆಯೊಂದು ನಾನಾ ತೆರನಾದ ಆಹಾರ ಪದಾರ್ಥಗಳನ್ನ ತಯಾರಿಸುತ್ತಿದ್ದಾರೆ. ಕಂಪ್ಲಿಯ ನಾನಾ ವಾರ್ಡುಗಳಲ್ಲಿನ ಕಡುಬಡವರ ಮನೆ ಬಾಗಿಲಿಗೆ ಹಂಚಿಕೆ ಮಾಡಿ ಈ ಲಾಕ್​ಡೌನ್ ದಿನಗಳನ್ನ ನಿಸ್ವಾರ್ಥ ಸೇವೆಗೆ ಮುಡುಪಾಗಿಟ್ಟಿದ್ದಾರೆ.

ಬಡವರಿಗೆ ಆಹಾರ ಪೂರೈಸುತ್ತಿರುವ ಕಂಪ್ಲಿ ಯುವಕರ ಪಡೆ

ನಾನಾ ವಲಯಗಳಲ್ಲಿ ಕಾರ್ಯನಿರ್ವಹಿಸುವ ಅಸಂಘಟಿತ ಕಾರ್ಮಿಕರೇ ಈ ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂಡಿರೋದು ಇನ್ನೂ ವಿಶೇಷ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಮನೆಗಳಲ್ಲಿ ಕೂರಲಾರದೇ ಬಡತನದಿಂದ ಬಂದವರು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಈ ಸೇವೆಯಲ್ಲಿ ತೊಡಗಿದ್ದಾರೆ.

ಕಡುಬಡತನದ ಹಿನ್ನೆಲೆಯಲ್ಲಿ ಬಂದ ನಮಗೆ ಈ ಲಾಕ್​ಡೌನ್ ದಿನಗಳನ್ನ ಕಡುಬಡವರ ಸೇವೆಗೆ ಮುಡುಪಾಗಿಟ್ಟುರೋದು ನಮಗೆ ಖುಷಿ ತಂದಿದೆ ಎಂದು ಕಂಪ್ಲಿಯ ಯುವಕ ಕೆ.ಹರ್ಷಿತ್ ಅವರು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ. ಅಂದಾಜು 3.5 ಕ್ವಿಂಟಾಲ್​ನಷ್ಟು ಆಹಾರವನ್ನ ದಿನಾಲೂ 2500ರಷ್ಟು ಪೊಟ್ಟಣ ಮಾಡಿ ಹಂಚಲಾಗುತ್ತಿದೆ. ಈ ಸೇವೆ ನಮಗೆ ಖುಷಿ ತಂದಿದೆ ಎಂದು ವೆಂಕಟಸ್ವಾಮಿ ಈಟಿವಿ ಭಾರತಗೆ ತಿಳಿಸಿದ್ದಾರೆ.

ABOUT THE AUTHOR

...view details