ಬಳ್ಳಾರಿ: ಗಂಡುಗಲಿ ಮೋದಿಯವರು ನಿಮ್ಮಂತಹ ಮೂಕ ಪ್ರಧಾನಿಯಲ್ಲ ಎಂದು ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿಯವರು ಪರೋಕ್ಷವಾಗಿ ಮನಮೋಹನ್ ಸಿಂಗ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸಿಎಎ ಪರ ರಾಜಕಾರಣಿ ಹಾಗೆ ಭಾಷಣ ಮಾಡಿದ ಕಲ್ಯಾಣ ಸ್ವಾಮೀಜಿ : VIDEO - kalyana Swamiji Modi speach about narendra modi
ಮೋದಿಯವರು ಗಂಡುಗಲಿ ಇದ್ದಂಗೆ. ಅವರು ಹಿಡಿದಿದ್ದನ್ನು ಕೈ ಬಿಡಲ್ಲ. ಮಾಡಿಯೇ ತಿರುತ್ತಾರೆ. ಈಗಾಗಲೇ ಸಿಎಎ ಕಾಯಿದೆ ಜಾರಿ ಆಗಿಬಿಟ್ಟಿದೆ. ಮೋದಿಯವರನ್ನು ಯಾರಿಂದಲೂ ಅಲುಗಾಡಿಸಲಿಕ್ಕಾಗಲ್ಲ ಎಂದು ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿ ಸಿಎಎ ಪರ ಬ್ಯಾಟಿಂಗ್ ಮಾಡಿದ್ದಾರೆ.
ಬಳ್ಳಾರಿಯಲ್ಲಿಂದು ದೇಶಭಕ್ತ ನಾಗರಿಕರ ವೇದಿಕೆಯಿಂದ ಪೌರತ್ವ ತಿದ್ದುಪಡಿ ಕಾಯಿದೆಯನ್ನ ಬೆಂಬಲಿಸಿ ಬೃಹತ್ ಪ್ರತಿಭಟನೆ ನಿಮಿತ್ತ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ಮೋದಿಯವರು ಗಂಡುಗಲಿ ಇದ್ದಂಗೆ. ಅವರು ಹಿಡಿದಿದ್ದನ್ನು ಕೈ ಬಿಡಲ್ಲ. ಮಾಡಿಯೇ ತಿರುತ್ತಾರೆ. ಈಗಾಗಲೇ ಸಿಎಎ ಕಾಯಿದೆ ಜಾರಿ ಆಗಿಬಿಟ್ಟಿದೆ. ಮೋದಿಯವರನ್ನು ಯಾರಿಂದಲೂ ಅಲುಗಾಡಿಸಲಿಕ್ಕಾಗಲ್ಲ ಎಂದು ಹೇಳಿದರು.
ಈ ಭಾರತ ದೇಶ ಎಂದಾಕ್ಷಣ ನಾನು ಸ್ವಾಮಿ ಎಂಬುದನ್ನೇ ಮರೆಯುತ್ತೇನೆ. ಸಿಎಎ ಅಂತಾ ಒಳ್ಳೆ ಕಾಯಿದೆಯನ್ನೇ ಕೆಲ ಕಿಡಿಗೇಡಿಗಳ ಮಾತನ್ನು ಕೇಳಿ ವಿರೋಧಿಸುತ್ತಾರೆ. ಈ ಕಾಯಿದೆ ವಿರೋಧಿ ಹೋರಾಟ ತಪ್ಪು ತಿಳಿವಳಿಕೆಯಿಂದ ಕೂಡಿದ್ದು. ವಿರೋಧಿಗಳು ಮುದ್ದೆ ತಿನ್ನುತ್ತಾರೋ ಲದ್ದಿ ತಿನ್ನುತ್ತಾರೆಯೋ ಎಂದು ಕಿಡಿಕಾರಿದ್ದಾರೆ. ಸ್ವಾಮೀಜಿ ಅವರು ಈ ರೀತಿಯ ಭಾಷಣ ವಿರೋಧಿಗಳ ಕೆಂಗಣ್ಣಿಗೆ ಕಾರಣವಾಗಿದ್ದು, ಚರ್ಚೆಯನ್ನೂ ಹುಟ್ಟು ಹಾಕಿದೆ.