ಬಳ್ಳಾರಿ:ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದ ಕಾಳಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಮೈಯಿಗೆ ಶಸ್ತ್ರ, ಬೆನ್ನಿಗೆ ಕಬ್ಬಿಣದ ಕೊಕ್ಕೆ ಹಾಕಿಕೊಂಡು ರುಬ್ಬು ಗುಂಡು ಹಾಗೂ ಆಟೋ ಎಳೆದು ಭಕ್ತಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ.
ದೇವರ ಹೆಸರಲ್ಲಿ ಉಪವಾಸವಿದ್ದು, ಮುಡಿ ನೀಡಿ ಅಥವಾ ವಿಶಿಷ್ಟ ರೀತಿಯ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಿ ಹರಕೆ ತೀರಿಸುವುದು ಸರ್ವೇ ಸಾಮಾನ್ಯ. ಆದರೆ, ಕಂಪ್ಲಿಯ ಮೀನುಗಾರರು ಆಚರಿಸುವ ಕಾಳಮ್ಮ ದೇವಿ ಜಾತ್ರೆಯಲ್ಲಿ ಭಕ್ತರು ಈ ರೀತಿ ದೇಹವನ್ನು ದಂಡಿಸಿ ದೇವಿಗೆ ಹರಕೆ ತೀರಿಸಿದ್ದಾರೆ. ಈ ಬಾರಿ 15ಕ್ಕೂ ಹೆಚ್ಚು ಜನರು ವಿಭಿನ್ನವಾಗಿ ತಮ್ಮ ಹರಕೆ ನೆರವೇರಿಸಿದ್ದಾರೆ.