ಕರ್ನಾಟಕ

karnataka

ETV Bharat / state

ಬಳ್ಳಾರಿ: ಫ್ಯಾನ್​ ಬಿಚ್ಚಿಕೊಂಡು ಬಿದ್ದು ಜೆಎಸ್​ಡಬ್ಲ್ಯು ಕಾರ್ಮಿಕ ಸಾವು - JSW labor death

ಬಳ್ಳಾರಿ ಜಿಲ್ಲೆಯ ಜೆಎಸ್​ಡಬ್ಲ್ಯು ಸ್ಟೀಲ್ಸ್​ ಉತ್ಪಾದನಾ ಘಟಕ ಒಂದರಲ್ಲಿ ಫ್ಯಾನ್​ ಬಿಚ್ಚಿಕೊಂಡು ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟಿದ್ದಾನೆ.

JSW labor death
ಫ್ಯಾನ್​ ಬಿಚ್ಚಿಕೊಂಡು ಬಿದ್ದು ಜೆಎಸ್​ಡಬ್ಲ್ಯು ಕಾರ್ಮಿಕ ಸಾವು

By

Published : Feb 3, 2021, 6:01 PM IST

ಬಳ್ಳಾರಿ:ಜಿಲ್ಲೆಯ ತೋರಣಗಲ್ಲಿನ ವಿದ್ಯಾನಗರದ ಜೆಎಸ್​ಡಬ್ಲ್ಯು ಸ್ಟೀಲ್ಸ್​ ಉತ್ಪಾದನಾ ಘಟಕದಲ್ಲಿ ಫ್ಯಾನ್​ ಬಿಚ್ಚಿಕೊಂಡು ಬಿದ್ದ ಪರಿಣಾಮ ಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ.

ಜೀತೆಂದ್ರ ಸಿಂಗ್ ಮೃತ ದುರ್ದೈವಿ. ಫ್ಯಾನ್​ ಬಿದ್ದಿದ್ದರಿಂದ ಕಬ್ಬಿಣದ ಸರಳುಗಳು ಈತನಿಗೆ ಚುಚ್ಚಿಕೊಂಡು ಗಂಭೀರ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಈ ಸಂಬಂಧ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details