ಬಳ್ಳಾರಿ: ಹೊಸಪೇಟೆ ನಗರದ ಹೊರವಲಯದಲ್ಲಿರುವ ಗುಂಡಾ ಸಸ್ಯ ಉದ್ಯಾನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ, ಪ್ರಸ್ತುತ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟು ಕುರಿತು ಹಿರಿಯ ಪತ್ರಕರ್ತ ಬಿ.ಎಂ.ಹನೀಫ ಉಪನ್ಯಾಸ ನೀಡಲಾಯಿತು.
ಪತ್ರಕರ್ತರು ಸರ್ಕಾರಿ ಸೌಲಭ್ಯ ಸದ್ಭಳಿಕೆ ಮಾಡಿಕೊಳ್ಳಲಿ: ಪತ್ರಕರ್ತ ಬಿ.ಎಂ. ಹನೀಫ
ಶಿಕ್ಷಕ ಹಾಗೂ ಪತ್ರಕರ್ತರ ಹುದ್ದೆಗಳು ಕೃತಜ್ಞತೆಯಿಂದ ಕೂಡಿವೆ. ಅವರು ಮೌಲ್ಯಗಳೊಂದಿಗೆ ಬದ್ಧರಾಗಿರಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ಬಿ.ಎಂ. ಹನೀಫ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹನೀಫ್ ಅವರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಕೇವಲ ಆಶ್ವಾಸನೆ ನೀಡಿದರೆ ಸಾಲದು, ಅವುಗಳನ್ನು ಈಡೇರಿಸಬೇಕು. ಬಸವಣ್ಣನವರು ವಚನ ಮೂಲಕ ಕನ್ನಡದ ಮೆರಗನ್ನು ಹೆಚ್ಚಿಸಿದ್ದರು. ಶಿಶುನಾಶ ಶರೀಫ್ ಜೀವನ ಹೇಗೆ ಮುನ್ನಡೆಸಬೇಕು ಎಂಬುದನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ತತ್ವ ಪದಗಳ ಮೂಲಕ ತಿಳಿಸಿದರು. ಶಿಕ್ಷಕ ಹಾಗೂ ಪತ್ರಕರ್ತರ ಹುದ್ದೆಗಳು ಕೃತಜ್ಞತೆಯಿಂದ ಕೂಡಿವೆ. ಅವರು ಮೌಲ್ಯಗಳಿಗೆ ಬದ್ಧರಾಗಿರಬೇಕಾಗುತ್ತದೆ. ವೈಯಕ್ತಿಕ ನಿಲುವುಗಳನ್ನು ಬದಿಗೊತ್ತಿ ಸಮಾಜದ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಆನಂದ್ ಸಿಂಗ್ ಮಾತನಾಡಿ, ಸಮಾಜವನ್ನು ಸರಿದಾರಿಯಲ್ಲಿ ನಡೆಸುವಂತ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಅದನ್ನು ಸರಿಯಾಗಿ ನಿಭಾಯಿಸಬೇಕು. ಸೈನಿಕರು ದೇಶದ ಗಡಿಯನ್ನು ರಕ್ಷಣೆ ಮಾಡುತ್ತಾರೆ. ಆದರೆ, ಪತ್ರಕರ್ತರು ದೇಶದ ಒಳಗಿನ ಸಮಾಜವನ್ನು ಕಾಯುವ ಸೈನಿಕರು. ಹೊಗಳಿಕೆ ಮತ್ತು ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಬೇಕು. ಪತ್ರಕರ್ತರಿಗೆ ನಿವೇಶನ ನೀಡಲು ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.