ಕರ್ನಾಟಕ

karnataka

By

Published : Jul 1, 2019, 5:16 PM IST

ETV Bharat / state

ಪತ್ರಕರ್ತರು ವಸ್ತುನಿಷ್ಠ ವರದಿಗಳನ್ನು ನೀಡಬೇಕು: ಡಿಸಿ ನಕುಲ್​​

ಕಾನೂನಾತ್ಮಕವಾಗಿ ಯಾವ ಯಾವ ಸುದ್ದಿ ನೀಡಬೇಕೆಂಬ ಕನಿಷ್ಠ ಮಾಹಿತಿ ಪತ್ರಕರ್ತರಿಗೆ ಇರಬೇಕು. ನಾನು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ವಾಮೀಜಿಯೊಬ್ಬರು ಸಾವನ್ನಪ್ಪಿದ್ದರು. ವೈದ್ಯಾಧಿಕಾರಿಗಳು ಆಂಗ್ಲ ಭಾಷೆಯಲ್ಲಿ ವಿಷಹಾರ ಸೇವನೆ ಎಂದು ಹೇಳಿದ್ದರು. ಆದರೆ, ಪತ್ರಕರ್ತರೊಬ್ಬರು ವಿಷಪ್ರಾಶನ ಸೇವನೆ ಶಂಕೆ ಎಂದು ಪ್ರಕರಣ ದಿಕ್ಕನ್ನೇ ಬದಲಾಯಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಹೇಳಿದರು.

ವಿಶ್ವ ಪತ್ರಿಕಾ ದಿನಾಚರಣೆ

ಬಳ್ಳಾರಿ :ಪತ್ರಕರ್ತರು ವಿಭಿನ್ನ ಮತ್ತು ವಸ್ತುನಿಷ್ಠತೆಯಿಂದ ಕೂಡಿದ ವರದಿಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಡಿಸಿ ಕಚೇರಿಯ ಆವರಣದಲ್ಲಿ ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರ ಆಲೋಚನೆಗಳು ವಿಭಿನ್ನವಾದ್ರೂ ವಸ್ತುನಿಷ್ಠ ವರದಿಯನ್ನು ಮಾಡಲು ತಾವೆಲ್ಲಾ ಮುಂದಾಗಬೇಕು. ವೃತ್ತಿ ಧರ್ಮದಲ್ಲಿ ಒಗ್ಗಟ್ಟು ಒಡೆಯಬಾರದು, ಜಿಲ್ಲೆಯಲ್ಲಿ ವಿಭಿನ್ನ, ಉತ್ತಮ ಬರಹಗಾರ ಪತ್ರಕರ್ತರೂ ಇದ್ದಾರೆ. ಉತ್ತಮ ಆಲೋಚನೆಗಳ ಅತ್ಯುತ್ತಮ ವರದಿ ಮೂಡಿ ಬರಲಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಕೆ.ನಿತೀಶಕುಮಾರ ಮಾತನಾಡಿ, ವಸ್ತುನಿಷ್ಠ ವರದಿ ಮಾಡುವಾಗ ಸಂಬಂಧಪಟ್ಟವರ ಹೇಳಿಕೆಯನ್ನು ಉಲ್ಲೇಖಿಸಬೇಕು. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ಪತ್ರಕರ್ತರು ಉತ್ತಮ ಮಾರ್ಗದಲ್ಲಿ ನಡೆಯಬೇಕೆಂದರು.

ವಿಶ್ವ ಪತ್ರಿಕಾ ದಿನಾಚರಣೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಮಾತನಾಡಿ, ಪತ್ರಕರ್ತರಿಗೆ ಕಾನೂನಿನ ಅರಿವು ಅಗತ್ಯವಿದೆ. ಕಾನೂನಾತ್ಮಕವಾಗಿ ಯಾವ ಯಾವ ಸುದ್ದಿ ನೀಡಬೇಕೆಂಬ ಕನಿಷ್ಠ ಮಾಹಿತಿ ಪತ್ರಕರ್ತರಿಗೆ ಇರಬೇಕು. ನಾನು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ವಾಮೀಜಿಯೊಬ್ಬರು ಸಾವನ್ನಪ್ಪಿದ್ದರು. ವೈದ್ಯಾಧಿಕಾರಿಗಳು ಆಂಗ್ಲ ಭಾಷೆಯಲ್ಲಿ ವಿಷಹಾರ ಸೇವನೆ ಎಂದು ಹೇಳಿದ್ದರು. ಆದರೆ, ಪತ್ರಕರ್ತರೊಬ್ಬರು ವಿಷಪ್ರಾಶನ ಸೇವನೆ ಶಂಕೆ ಎಂದು ಪ್ರಕರಣ ದಿಕ್ಕನ್ನೇ ಬದಲಾಯಿಸಿದ್ದರು. ಈ ನಿಟ್ಟಿನಲ್ಲಿ ಅಸತ್ಯ ಸುದ್ದಿ ಬಿತ್ತರಿಸುವ ವರದಿಗಾರರ ಮೇಲೆ ತನಿಖೆಯ ಅನಿವಾರ್ಯತೆ ಬಂತು. ಅದಕ್ಕಾಗಿ ತಿಳಿದುಕೊಂಡು ನಂತರ ವರದಿ ಮಾಡಿ ಎಂದು ಸಲಹೆ ನೀಡಿದರು.

ABOUT THE AUTHOR

...view details