ಕರ್ನಾಟಕ

karnataka

ETV Bharat / state

Jobs: ರಾಷ್ಟ್ರೀಯ ಆರೋಗ್ಯ ಅಭಿಯಾನಯಡಿ 36 ಹುದ್ದೆಗಳಿಗೆ ನೇಮಕಾತಿ; ಅರ್ಹತೆ, ಅನುಭವ, ವೇತನದ ಸಂಪೂರ್ಣ ಮಾಹಿತಿ.. - ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ

ಜಿಲ್ಲಾ ಆರೋಗ್ಯ ಸಂಘದ ವತಿಯಿಂದ ಗುತ್ತಿಗೆ ಆಧಾರದ ಮೇಲೆ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

Nurse Doctor recruitment under National Health Mission in Ballari
Nurse Doctor recruitment under National Health Mission in Ballari

By

Published : Jun 30, 2023, 5:07 PM IST

ಬಳ್ಳಾರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅರ್ಜಿ ಆಹ್ವಾನಿಸಿದೆ. ನರ್ಸ್​​, ವೈದ್ಯಕೀಯ ಅಧಿಕಾರಿ ಸೇರಿದಂತೆ 36 ಹುದ್ದೆಗಳ ನೇಮಕಾತಿ ನಡೆಯಲಿದೆ. ಹುದ್ದೆಗಳು ಸಂಪೂರ್ಣ ತಾತ್ಕಾಲಿಕ. ಒಂದು ವರ್ಷದ ಗುತ್ತಿಗೆ ಅವಧಿಗೆ ನೇಮಕಾತಿ ನಡೆಯಲಿದೆ.

ಅಧಿಸೂಚನೆ

ಹುದ್ದೆಗಳ ವಿವರ: ನರ್ಸ್​, ಕಮ್ಯುನಿಟಿ ನರ್ಸ್​, ಜಿಲ್ಲಾ ಆಶಾ ಕಾರ್ಯಕರ್ತರು, ಮೆಡಿಕಲ್​ ಆಫೀಸರ್, ಆಯುಷ್​​ ಮೆಡಿಕಲ್​ ಆಫೀಸರ್​, ಪಿಡಿಯಾಟ್ರಿಷನ್​, ಅನಾಸ್ತೇಷಿಯಾ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಇಎನ್​ಟಿ ತಜ್ಞರು, ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರರು, ಶ್ರವಣದೋಷವುಳ್ಳ ಮಕ್ಕಳ ಬೋಧಕರು, ಪ್ರಾಥಮಿಕ ಆರೋಗ್ಯ ಸಂರಕ್ಷಣಾ ಅಧಿಕಾರಿ ಹಾಗು ಪ್ರಯೋಗಾಲಯ ತಜ್ಞರು.

ವಿದ್ಯಾರ್ಹತೆ:ಹುದ್ದೆಗೆ ಅನುಗುಣವಾಗಿ ಬಿಎಸ್ಸಿ ನರ್ಸಿಂಗ್​, ಡಿಪ್ಲೊಮಾ ನರ್ಸಿಂಗ್​, ಬಿಎಎಂಎಸ್​, ಎಂಬಿಬಿಎಸ್​​, ಪಿಯುಸಿ, ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪದವಿ.

ಅನುಭವ: 1 ರಿಂದ ಮೂರು ವರ್ಷ ಹುದ್ದೆ ನಿಭಾಯಿಸಿದ ಅನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ ಹುದ್ದೆಗೆ ಅನುಸಾರವಾಗಿ 40 ರಿಂದ 60 ವರ್ಷ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಯೋಮಿತಿ ಸಡಿಲಿಕೆ ಇದೆ.

ವೇತನ: ಅಭ್ಯರ್ಥಿಗಳ ಹುದ್ದೆಗೆ ಅನುಸಾರವಾಗಿ 13, 225ರಿಂದ 1,30,000 ರೂವರೆಗೆ ವೇತನವಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಬಳ್ಳಾರಿ ಜಿಲ್ಲಾಡಳಿತದ ಅಧಿಕೃತ ಜಾಲತಾಣದಲ್ಲಿ ನೇಮಕಾತಿಯ ನಿಗದಿತ ಅರ್ಜಿ ಸಲ್ಲಿಕೆಯನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕು/ ಜಿಲ್ಲಾ ಆರ್​​ಸಿಎಚ್​ ಅಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿ ಇಲ್ಲಿ ನಿಗದಿತ ಅರ್ಜಿ ಪಡೆಯಬೇಕು. ನಿಗದಿತ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿ ಮತ್ತು ಅಗತ್ಯ ದೃಢೀಕರಣದ ದಾಖಲೆಗಳೊಂದಿಗೆ ಜುಲೈ 7ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯವ ದಾಖಲಾತಿ ಪರಿಶೀಲನೆಯಲ್ಲಿ ಭಾಗಿಯಾಗಬೇಕು. ರೋಸ್ಟರ್​ ಮತ್ತು ಮೆರಿಟ್​ ಆಧಾರತ ಮೇಲೆ ಅಭ್ಯರ್ಥಿಗಳ ನೇಮಕಾತಿ ನಡೆಯಲಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜುಲೈ 15ರಂದು ಪ್ರಕಟಿಸಲಾಗುತ್ತದೆ.

ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ, ಅರ್ಜಿ ನಮೂನೆಗೆ ballari.nic.in ಈ ಅಧಿಕೃತ ಜಾಲತಾಣಕ್ಕೆ ಅಭ್ಯರ್ಥಿಗಳು ಭೇಟಿ ನೀಡಿ.

ಇದನ್ನೂ ಓದಿ: Job Alert: ಚಿತ್ರದುರ್ಗ- ಕೋಲಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ನೇಮಕಾತಿ

ABOUT THE AUTHOR

...view details