ಕರ್ನಾಟಕ

karnataka

ETV Bharat / state

ಜಿಂದಾಲ್ 'ಗರಡಿ'ಯೊಳಗೆ ಮಹಿಳಾ ಸಬಲೀಕರಣ.. ಸಾವಿರಾರು ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ! - ಗಣಿ ಜಿಲ್ಲೆ ಬಳ್ಳಾರಿಯ ಜಿಂದಾಲ್ ಉಕ್ಕು‌ ಕಾರ್ಖಾನೆ

ಗಣಿ ಜಿಲ್ಲೆ ಬಳ್ಳಾರಿಯ ಜಿಂದಾಲ್ ಉಕ್ಕು‌ ಕಾರ್ಖಾನೆಯಲ್ಲಿ ಮಹಿಳಾ ಸಬಲೀಕರಣದ ಗರಡಿಗೆ ಚಾಲನೆ ದೊರೆತಿದೆ. ಸಾವಿರಾರು ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ‌ ತರಬೇತಿ ನೀಡಿ ಅಗತ್ಯ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ.

ತರಬೇತಿ

By

Published : Nov 17, 2019, 6:37 PM IST

ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ ಗ್ರಾಮೀಣ ಭಾಗದ ಯುವತಿಯರನ್ನ ಗುರುತಿಸಿ ನರ್ಸಿಂಗ್ ತರಬೇತಿ ನೀಡಿ ಹಿರಿಯ‌ ನಾಗರಿಕರ ಆರೈಕೆಯ ಕುರಿತು ತರಬೇತಿ ನೀಡಿ ಪ್ರಮಾಣ ಪತ್ರ ಕೊಡಲಾಗುತ್ತದೆ.

ಜಿಲ್ಲೆಯ ಸಂಡೂರು ತಾಲೂಕಿನ ನಾನಾ ಗ್ರಾಮೀಣ ಪ್ರದೇಶಗಳಲ್ಲಿ 8ನೇ ತರಗತಿ, ಎಸ್ಎ​​ಸ್​​ಎಲ್​​ಸಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾದ ಯುವತಿಯರಿಗೆ ಬ್ಯೂಟಿಷಿಯನ್, ಹಿರಿಯ ನಾಗರಿಕರ ಹಾಗೂ ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದವರ ರಕ್ಷಣೆ ಯಾವ ರೀತಿ ಮಾಡಬೇಕೆಂಬುದು ಸೇರಿದಂತೆ ಇನ್ನಿತರೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುತ್ತೆ.

ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ..

ಶಂಕರಗುಡ್ದದ ವಿದ್ಯಾನಗರದಲ್ಲಿರುವ ಉಭಯ ಶಕ್ತಿ ಕೇಂದ್ರದಲ್ಲಿ ಕಂಪ್ಯೂಟರ್ ತರಬೇತಿಯೊಂದಿಗೆ ಇನ್ವಾಯಿಸ್, ಡಾಟಾ ಎಂಟ್ರಿ ಸೇರಿದಂತೆ ಇನ್ನಿತರೆ ತರಬೇತಿಯನ್ನು ಇಲ್ಲಿ ಕೊಡಲಾಗುತ್ತಿದೆ. ಈವರೆಗೂ ಅಂದಾಜು 2,700ಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ತರಬೇತಿ ಪಡೆದು ಜಿಂದಾಲ್ ಸಮೂಹ ಸಂಸ್ಥೆಯ ನಾನಾ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿತ್ತಿದ್ದಾರೆ.

ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ, ಭುವನಹಳ್ಳಿ, ಗಾದಿಗನೂರು, ವಡ್ಡು, ಬಸಾಪುರ, ತೋರಣಗಲ್ಲು, ತಾಳೂರು, ಜೋಗ, ವಿಠ್ಲಾಪುರ, ಸಂಡೂರು, ತಾರಾನಗರ, ಬಳ್ಳಾರಿ ಮತ್ತು ಹೊಸಪೇಟೆ ನಗರದ ಯುವತಿಯರು ಈ ಗರಡಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ABOUT THE AUTHOR

...view details