ಕರ್ನಾಟಕ

karnataka

ETV Bharat / state

ಹೊಸಪೇಟೆ: ವಿದ್ಯುತ್ ಮಸೂದೆ ತಿದ್ದುಪಡಿ ವಿರೋಧಿಸಿ ಜೆಸ್ಕಾಂ ನೌಕಕರರ ಪ್ರತಿಭಟನೆ - Protests of Hospet Jesscom employees

ವಿದ್ಯುತ್ ಮಸೂದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಹೊಸಪೇಟೆ ನಗರದಲ್ಲಿ ಜೆಸ್ಕಾಂ ನೌಕಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

Jescom employees protest against electricity act amendment
ಹೊಸಪೇಟೆ: ವಿದ್ಯುತ್ ಮಸೂದೆ ತಿದ್ದುಪಡಿ ವಿರೋಧಿಸಿ ಜೆಸ್ಕಾಂ ನೌಕಕರರ ಪ್ರತಿಭಟನೆ

By

Published : Oct 5, 2020, 1:40 PM IST

ಹೊಸಪೇಟೆ: ವಿದ್ಯುತ್ ಮಸೂದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಜೆಸ್ಕಾಂ ನೌಕಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಹೊಸಪೇಟೆ: ವಿದ್ಯುತ್ ಮಸೂದೆ ತಿದ್ದುಪಡಿ ವಿರೋಧಿಸಿ ಜೆಸ್ಕಾಂ ನೌಕಕರರ ಪ್ರತಿಭಟನೆ

ನಗರದ ಕೆಇಬಿ ಕಚೇರಿ ಮುಂಭಾಗ ಜೆಸ್ಕಾಂ ನೌಕಕರು ವಿದ್ಯುತ್ ಮಸೂದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಮಸೂದೆ ತಿದ್ದಪಡಿ ಮಾಡುವುದರಿಂದ ಖಾಸಗೀಕರಣವಾಗಲಿದೆ.‌‌ ಇದು ನೌಕರರಿಗೆ ಮಾರಕವಾಗಲಿದೆ. ಅಲ್ಲದೆ ಗ್ರಾಹಕರಿಗೆ ಹೆಚ್ಚಿನ‌ ಹೊರೆ ಬೀಳಲಿದೆ. ಸರ್ಕಾರ ಕೆಲ ಪ್ರದೇಶಗಳನ್ನು ಮಾತ್ರ ಖಾಸಗೀಕರಣ ಮಾಡಲಾಗುವುದು ಎಂದು ಹೇಳಿತ್ತು. ಆದರೆ ಈಗ ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈಗ ಏಕಾಏಕಿ ತಿದ್ದುಪಡಿಯನ್ನು ಮಾಡಿ, ದೇಶದ ಎಲ್ಲಾ ರಾಜ್ಯಗಳಲ್ಲಿ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡಲು ಹೊರಟಿದೆ. ಕೂಡಲೇ ತಿದ್ದುಪಡಿಯನ್ನು ಹಿಂಪಡೆಯಬೇಕು.‌ಇಲದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ABOUT THE AUTHOR

...view details