ಕರ್ನಾಟಕ

karnataka

ETV Bharat / state

ಜೆಡಿಎಸ್‌ ತ್ಯಜಿಸಿ ಜನಾರ್ದನ ರೆಡ್ಡಿ ಪಕ್ಷ ಸೇರಿದ ಮುನ್ನಾಬಾಯಿ - ಜೆಡಿಎಸ್​ ವರಿಷ್ಠರ ವಿರುದ್ಧ ಆಕ್ರೋಶ

ಜೆಡಿಎಸ್​ ವರಿಷ್ಠರ ವಿರುದ್ಧ ಆಕ್ರೋಶಗೊಂಡಿರುವ ಮುನ್ನಾಬಯಿ ಪಕ್ಷಕ್ಕೆ ಗುಡ್​ ಬೈ ಹೇಳಿ ಕೆಆರ್​​ಪಿಪಿ ಸೇರ್ಪಡೆಯಾದರು.

ಜೆಡಿಎಸ್‌ಗೆ ಗುಡ್ ಬೈ ಹೇಳಿ ಕೆಆರ್​ಪಿಪಿ ಸೇರಿದ ಮುನ್ನಾಬಾಯಿ
ಜೆಡಿಎಸ್‌ಗೆ ಗುಡ್ ಬೈ ಹೇಳಿ ಕೆಆರ್​ಪಿಪಿ ಸೇರಿದ ಮುನ್ನಾಬಾಯಿ

By

Published : Apr 21, 2023, 7:57 PM IST

ಕೆಆರ್​ಪಿಪಿ ಸೇರಿದ ಮುನ್ನಾಬಾಯಿ

ಬಳ್ಳಾರಿ :ಜೆಡಿಎಸ್ ಮುಖಂಡ ಮುನ್ನಾಬಾಯಿ ಜೆಡಿಎಸ್‌ಗೆ ವಿದಾಯ ಹೇಳಿದ್ದು, ಗಾಲಿ ಜನಾರ್ದನ ರೆಡ್ಡಿ ನೇತೃತ್ವದ ಕೆಆರ್‌ಪಿಪಿ ಪಕ್ಷವನ್ನು ಇಂದು ಸಂಜೆ ಸೇರಿದರು. ಬಳ್ಳಾರಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಜೆಡಿಎಸ್‌ನಿಂದ ಬಿ ಫಾರಂ ಪಡೆದು ನಂತರ ನಡೆದ ಅನಿರೀಕ್ಷಿತ ಬೆಳವಣಿಯಿಂದ ಇವರು ಟಿಕೆಟ್ ಕಳೆದುಕೊಂಡಿದ್ದರು. ಬಳ್ಳಾರಿ ನಗರ ಕೆಆರ್‌ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಮುನ್ನಾಬಾಯಿಗೆ ಏಪ್ರಿಲ್​​ 18 ರಂದು ಜೆಡಿಎಸ್ ವರಿಷ್ಠರು ಟಿಕೆಟ್ ನೀಡಿದ್ದರು. ನಂತರ ಮಾಜಿ ಶಾಸಕ ಅನಿಲ್ ಲಾಡ್ ಜೆಡಿಎಸ್ ಸೇರ್ಪಡೆಯಾಗಿದ್ದು ಬಳ್ಳಾರಿ ನಗರದಿಂದ ಸ್ಪರ್ಧಿಸಲು ಬಿ ಫಾರಂ ಪಡೆದಿದ್ದರು. ಇದರಿಂದ ಆಕ್ರೋಶಗೊಂಡ ಮುನ್ನಾಬಾಯಿ ಪಕ್ಷ ತ್ಯಜಿಸಿದ್ದಾರೆ.

ಕೆಆರ್‌ಪಿಪಿ ಸೇರುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಏಪ್ರಿಲ್​ 18 ರಂದು ಮಧ್ಯಾಹ್ನ ಜೆಡಿಎಸ್ ಬಿ ಫಾರಂ ನೀಡಿದೆ. ಅವತ್ತೇ ರಾತ್ರಿ ಅನಿಲ್ ಲಾಡ್‌ ಬಿ ಫಾರಂ ನೀಡಿದ್ದಾರೆ. 2013 ರಲ್ಲಿ ನಾನು ಬಳ್ಳಾರಿ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. 2018ರಲ್ಲಿ ಕುಮಾರಣ್ಣನ ಮಾತಿಗೆ ಗೌರವ ಕೊಟ್ಟು ಗಣಿ ಮಾಲೀಕರಿಗೆ ಜೆಡಿಎಸ್ ಟಿಕೆಟ್ ಬಿಟ್ಟು ಕೊಟ್ಟೆ. ಈಗ ಮತ್ತೆ ನನ್ನ ಬದಲಿಗೆ ಗಣಿ ಮಾಲೀಕ ಅನಿಲ್ ಲಾಡ್​ಗೆ ಟಿಕೆಟ್ ನೀಡಿದ್ದಾರೆ. ಟಿಕೆಟ್ ಪಡೆದ ಲಾಡ್ ಸೌಜನ್ಯಕ್ಕಾದ್ರೂ ನನ್ನ ಭೇಟಿಯಾಗಿಲ್ಲ. ಪಕ್ಷದಲ್ಲಿ ನನಗೆ ಆಗುತ್ತಿರುವ ಅನ್ಯಾಯವನ್ನು ಧಿಕ್ಕರಿಸಿ ನಾನು ಜೆಡಿಎಸ್ ತೊರೆದು, ಕೆಆರ್‌ಪಿಪಿ ಪಕ್ಷ ಸೇರುತ್ತಿದ್ದೇನೆ" ಎಂದರು.

ನಾಮಪತ್ರ ಸಲ್ಲಿಕೆ ಮಾಹಿತಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಉಮೇದುವಾರಿಕೆ ಸಲ್ಲಿಕೆಯ ಕೊನೆಯ ದಿನವಾಗಿದ್ದ ಗುರುವಾರ ಒಟ್ಟು 36 ಅಭ್ಯರ್ಥಿಗಳಿಂದ 42 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ತಿಳಿಸಿದ್ದರು. ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಉತ್ತನೂರು ನಾಗರಾಜ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಹೆಚ್ ಪ್ರಹ್ಲಾದ ನಾಯಕ್, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಟಿ.ಹೆಚ್.ಸುರೇಶ್ ಬಾಬು ಅವರು ದೇಶ ಪ್ರೇಮ ಪಕ್ಷದ ಅಭ್ಯರ್ಥಿಯಾಗಿ ರಾಮಕ್ಕ ಟಿ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ನಾಯಕರ ದುರುಗಪ್ಪ ನಾಮಪತ್ರ ಸಲ್ಲಿಸಿದ್ದಾರೆ.

ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಬಿ. ಲೋಕೇಶ್, ಜನತಾ ದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಬಿ.ಪರಮೇಶ್ವರ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಎಂ.ಎಸ್.ಸಿದ್ದಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿಯಾಗಿ ಹೆಚ್.ಸಿ.ರಾಧಾ, ಪಕ್ಷೇತರ ಅಭ್ಯರ್ಥಿಯಾಗಿ ಮಾರೆಣ್ಣ, ಜನತಾ ದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಮಲ್ಲಯ್ಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿಯಾಗಿ ಟಿ.ದರಪ್ಪ ನಾಯಕ, ಪಕ್ಷೇತರ ಅಭ್ಯರ್ಥಿಯಾಗಿ ಹನುಮಂತ.ಎಸ್, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷದ ಅಭ್ಯರ್ಥಿಯಾಗಿ ಎಂ.ಹೆಚ್.ವೀರೇಶಪ್ಪ ಹುಣಸೇಮರದವರು ಮತ್ತು ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷದ ಅಭ್ಯರ್ಥಿಯಾಗಿ ಈರಬಸಮ್ಮ ಹುಣಸೇಮರದವರು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಬಳ್ಳಾರಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 36 ಅಭ್ಯರ್ಥಿಗಳಿಂದ 42 ನಾಮಪತ್ರ ಸಲ್ಲಿಕೆ

ABOUT THE AUTHOR

...view details