ಬಳ್ಳಾರಿ :ಲಾಕ್‌ಡೌನ್ ಸಮಯದಲ್ಲಿ ಜಿಲ್ಲೆಯ ನಿರ್ಗತಿಕರಿಗೆ ಹಾಗೂ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ಆಹಾರ ಪೊಟ್ಟಣ ಹಾಗೂ ದಿನಸಿ ಕಿಟ್‌ಗಳನ್ನ ವಿತರಿಸಿ ಮಾನವೀಯತೆ ಮೆರೆದ ಕೊರೊನಾ ವಾರಿಯರ್ಸ್ಗಳಿಗೆ ಕರ್ನಾಟಕ ಜನಸೈನ್ಯ ಸಂಘಟನೆಯ ಪದಾಧಿಕಾರಿಗಳು ಶ್ರಮಿಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಕರ್ನಾಟಕ ಜನಸೈನ್ಯ ಸಂಘಟನೆಯಿಂದ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಕರ್ನಾಟಕ ಜನಸೈನ್ಯ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ ಎರಿಸ್ವಾಮಿ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿದ ಧ್ರುವ ಸರ್ಜಾ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ ಜಿ ಕನಕ, ನಾನಾ ಸಂಘಟನೆಯ ಮುಖಂಡರಾದ ಕೆ ಎಸ್ ಅಶೋಕ್‌ಕುಮಾರ್, ಅಸುಂಡಿ ಹೊನ್ನೂರಪ್ಪ, ಎಂ ಗೋವಿಂದರಾಜಲು, ಕೆ.ಗುರುರಾಜ್, ಎಂ ಜಿ ಕನಕ, ಪ್ರಭಂಜನ್ ಕುಮಾರ ಅವರನ್ನ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಎರಿಸ್ವಾಮಿ ಅವರು, ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸಿ, ಹಸಿದವರ ಹೊಟ್ಟೆಯನ್ನ ತುಂಬಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂಥ ವಾರಿಯರ್ಸ್ಗಳಿಗೆ ನಮ್ಮ ಸಂಘಟನೆಯಿಂದ ಶ್ರಮಿಕ ರತ್ನ ಪ್ರಶಸ್ತಿ ಪತ್ರ ನೀಡಿ, ಸನ್ಮಾನಿಸುತ್ತಿರುವುದು ನಮಗೆ ಖುಷಿ ತಂದಿದೆ ಎಂದರು.
ಚಿರಂಜೀವಿ ಸರ್ಜಾರ ಸ್ಮರಣೆ: ಧ್ರುವ ಸರ್ಜಾ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ ಜಿ ಕನಕ ಅವರು ಸನ್ಮಾನ ಸ್ವೀಕರಿಸಿ ಅಕಾಲಿಕ ಮರಣ ಹೊಂದಿದ ನಾಯಕ ನಟ ಚಿರಂಜೀವಿ ಸರ್ಜಾರ ಸ್ಮರಣೆ ಮಾಡಿದ್ರು. ಆ ಬಳಿಕ ಈ ಪ್ರಶಸ್ತಿಯು ನಮ್ಮಣ್ಣ ಚಿರಂಜೀವಿ ಸರ್ಜಾರ ಪಾದಕ್ಕೆ ಸೇರಲಿದೆ ಎಂದು ಕಂಬನಿ ಮಿಡಿದರು.