ಬಳ್ಳಾರಿ:ನಗರದ ಅದಿದೇವತೆ ಕನಕದುರ್ಗಮ್ಮ ದೇಗುಲದ ಆಡಳಿತ ಮಂಡಳಿ ವಿರುದ್ಧ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕರ್ನಾಟಕ ಜನಸೈನ್ಯ ಸಂಘಟನೆ ಪದಾಧಿಕಾರಿಗಳು ದೂರು ಸಲ್ಲಿಸಿದರು.
ಕನಕದುರ್ಗಮ್ಮ ಆಡಳಿತ ಮಂಡಳಿ ವಿರುದ್ಧ ಸಚಿವರಿಗೆ ದೂರು ನೀಡಿದ ಜನಸೈನ್ಯ ಸಂಘಟನೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಚಿವ ಶ್ರೀನಿವಾಸ ಪೂಜಾರಿ ಅವರಿಗೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎರಿಸ್ವಾಮಿ ನೇತೃತ್ವದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಕನಕದುರ್ಗಮ್ಮ ದೇಗುಲಕ್ಕೆ ಕಾಣಿಕೆಯಾಗಿ ಬಂದಿರುವ ಸೀರೆಗಳೆಷ್ಟು ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಭಕ್ತರು ತೀರಿಸಿದ ಹರಕೆಯಿಂದ ಈವರೆಗೂ ಬಂದಿರುವ ಚಿನ್ನಾಭರಣಗಳ ಮಾಹಿತಿಯೂ ಕೂಡ ಆಡಳಿತ ಮಂಡಳಿ ನೀಡುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ ದೇಗುಲದಲ್ಲಿ ನಡೆಯುವ ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಎಲೆಪೂಜೆ ಮತ್ತು ಕುಂಭಪೂಜೆಗೆ ಈವರೆಗೂ ಸಂಗ್ರಹಿಸಿದ ಹಣದ ಮಾಹಿತಿ, ದೇಗುಲಕ್ಕೆ ಉತ್ತಮ ಅರ್ಚಕರ ನೇಮಕ ವಿಚಾರ, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಚಿವ ಪೂಜಾರಿ ಬಳಿ ವಿನಂತಿಸಿಕೊಂಡರು.
ಕರ್ನಾಟಕ ಜನಸೈನ್ಯ ಸಂಘಟನೆಯ ಪದಾಧಿಕಾರಿಗಳಾದ ಬಿ.ಹೊನ್ನೂರಪ್ಪ, ಕೆ.ಎಸ್.ಅಶೋಕ್ ಕುಮಾರ್, ಎಂ.ಚೆಂಚಯ್ಯ, ಫಯಾಜ್ ಬಾಷಾ, ಎಸ್.ನಾಸೀರ್, ಎಸ್.ಖಾಜಾ, ಕೆ.ಹೊನ್ನೂರ ಸ್ವಾಮಿ, ಸಿ.ಹೆಚ್.ರಾಧಾಕೃಷ್ಣ, ಕೆ.ಶೇಖರ್, ಅರುಣ್ ಕುಮಾರ್, ಹುಲಿಗೇಶ, ಮಹೇಶ್, ಹೊನ್ನೂರ ಸ್ವಾಮಿ ಇದ್ದರು.