ಬಳ್ಳಾರಿ: ನಗರದ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಅತ್ಯಾಚಾರ ಖಂಡಿಸಿ ಕಪ್ಪುಪಟ್ಟಿ ಧರಿಸಿ ಜನಧ್ವನಿ ಧಮನ ಪ್ರತಿಭಟನೆ ನಡೆಯಿತು.
ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಕಪ್ಪುಪಟ್ಟಿ ಧರಿಸಿ ಜನಧ್ವನಿ ಧಮನ ಪ್ರತಿಭಟನೆ... - Protest led by Bellary District Congress Committee
ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಅತ್ಯಾಚಾರ ಖಂಡಿಸಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜನಧ್ವನಿ ಧಮನ ಪ್ರತಿಭಟನೆಯನ್ನು ನಡೆಸಲಾಯಿತು.

ಜನಧ್ವನಿ ಧಮನ ಪ್ರತಿಭಟನೆ
ಪ್ರತಿಭಟನೆ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಫೀಕ್ ತಿಳಿಸಿದರು. ಆದ್ರೇ 1 ತಾಸು ತಡವಾಗಿ ಆರಂಭವಾಗಿದೆ. ಇನ್ನು 11 ಗಂಟೆ 30 ನಿಮಿಷಕ್ಕೆ ಸಂಸದ ವಿ.ಎಸ್ ಉಗ್ರಪ್ಪ ಅವರು ಹಾಜರಾದರು.
ಕಾಂಗ್ರೆಸ್ ಪಕ್ಷದಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ.
ಈ ಸಮಯದಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್ ಮಹಮ್ಮದ್ ರಫೀಕ್, ಕಲ್ಲುಕಂಬ ಪಂಪಾಪತಿ, ಅಸುಂಡಿ ನಾಗರಾಜ್, ಮಾಜಿ ಕಾರ್ಪೋರೇಟರ್ ಪರಮಿನ್ ಬಾನು ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ಹಾಜರಿದ್ದರು.