ಬಳ್ಳಾರಿ:ದಲಿತ ಮತ್ತು ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ತುಮಕೂರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಡಾ.ಜಿ ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ಖಂಡಿಸಿ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್ ಯುವಸೈನ್ಯ ತೀವ್ರ ವಿರೋಧ ವ್ಯಕ್ತಪಡಿಸಿದೆ.
ದಲಿತರನ್ನು ಹತ್ತಿಕ್ಕುವ ಉದ್ದೇಶದಿಂದ ಪರಮೇಶ್ವರ್ ಮೇಲೆ ಐಟಿ ದಾಳಿ: ಬಸವರಾಜ್ ವಾಗ್ದಾಳಿ - ಇತ್ತೀಚಿನ ಬಳ್ಳಾರಿ ಸುದ್ದಿ
ಡಾ.ಜಿ ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ಖಂಡಿಸಿ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್ ಯುವಸೈನ್ಯ ತೀವ್ರ ವಿರೋಧ ವ್ಯಕ್ತಪಡಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಮುಖಂಡ ಬಸವರಾಜ್, ಉದ್ದೇಶ ಪೂರಕವಾದ ಐಟಿ ದಾಳಿ ನಡೆಸಿ ರಾಜಕೀಯ ಅಲ್ಪ ಸಂಖ್ಯಾತರಾಗಿರುವ ದಲಿತ ವರ್ಗವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನೂ ಪರಮೇಶ್ವರ್ ಅವರ ತಂದೆ ಗಂಗಾಧರಪ್ಪ ಅವರು 60 ವರ್ಷಗಳ ಹಿಂದೆಯೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅದರಲ್ಲಿ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ ಎಂದರು. ಆದರೀಗ ಐಟಿ ದಾಳಿ ಉತ್ತಮ ನಡೆಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ ಯುವಸೈನ್ಯದ ಕೆ.ನಾಗರಾಜ್, ಶಿವ ಕುಮಾರ್, ಸೂರ್ಯನಾರಾಯಣ, ಸಿದ್ದಲಿಂಗ, ಬಸವರಾಜ್ ,ರಾಮಚಂದ್ರ ಮತ್ತು ಇನ್ನಿತರರು ಹಾಜರಿದ್ದರು.