ಹೊಸಪೇಟೆ :ನಗರದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಇಂದು ಮೃತಪಟ್ಟ ಸಂಡೂರು ಘಟಕದ ನಿರ್ವಾಹಕ ಬಾಲನಂದ ಅವರ ಕುಟುಂಬಕ್ಕೆ ಮೂರು ಲಕ್ಷ ರೂ.ಚೆಕ್‌ನ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ವಿತರಿಸಿದರು.
ಮೃತ KSRTC ನಿರ್ವಾಹಕನ ಕುಟುಂಬಕ್ಕೆ ₹3 ಲಕ್ಷ ಪರಿಹಾರದ ಚೆಕ್ ವಿತರಣೆ..
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಇಂದು ಮೃತಪಟ್ಟ ಸಂಡೂರು ಘಟಕದ ನಿರ್ವಾಹಕ ಬಾಲನಂದ ಅವರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಲಾಯಿತು..
ಸಾರಿಗೆ ಸಂಸ್ಥೆಯ ಮೃತ ನಿರ್ವಾಹಕನ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರದ ಚೆಕ್
ಮೃತರ ತಂದೆ ಐ. ದೊಡ್ಡವೀರಪ್ಪ ಹಾಗೂ ಸಹೋದರ ಐ.ಪ್ರಸನ್ನಕುಮಾರ್ ಅವರಿಗೆ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರು ಮಾತನಾಡಿ, ನಿರ್ವಾಹಕ ಬಾಲನಂದ ಅವರ ಆಶಯದಂತೆ ತಂದೆ ಹಾಗೂ ಸಹೋದರನಿಗೆ ಪರಿಹಾರದ ಚೆಕ್ ನೀಡಲಾಗಿದೆ ಎಂದರು.
ನಂತರ ಮಾತು ಮುಂದುವರೆಸಿ, ಆಂತರಿಕ ಗುಂಪು ವಿಮಾ ಯೋಜನೆಯಡಿ ಪರಿಹಾರ ನೀಡಲಾಗುತ್ತಿದೆ. ಬಾಲನಂದ(56) ಅನಾರೋಗ್ಯದಿಂದ ಇತ್ತೀಚೆಗೆ ಮೃತಪಟ್ಟಿದ್ದರು ಎಂದು ತಿಳಿಸಿದರು.