ಕರ್ನಾಟಕ

karnataka

ETV Bharat / state

ಸರ್ವೆ ನಕ್ಷೆ ಬದಲಿಗೆ, ಲೇಔಟ್ ಯೋಜನಾ ನಕ್ಷೆ ನೀಡಿಕೆ: ಬುಡಾ ಅಧ್ಯಕ್ಷ - Issue a layout plan map

ಇನ್ಮುಂದೆ ಬುಡಾದಿಂದ ಸರ್ವೆ ನಕ್ಷೆ ಬದಲಿಗೆ, ಲೇಔಟ್ ಯೋಜನಾ ನಕ್ಷೆ ನೀಡಬೇಕು ಎಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಹೇಳಿದರು.

Bellary Urban Development Authority Meeting
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಸಭೆ

By

Published : Jul 6, 2020, 5:56 PM IST

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ವತಿಯಿಂದ ಇನ್ನು ಮಂದೆ ಅನುಮೋದಿತ ವಿನ್ಯಾಸಗಳಲ್ಲಿನ ನಿವೇಶನಗಳಿಗೆ ಸರ್ವೆ ನಕ್ಷೆ ನೀಡುವುದರ ಬದಲಿಗೆ ಅನುಮೋದಿತ ಲೇಔಟ್ ಪ್ಲಾನ್ ನಕ್ಷೆ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದರು.

ಅದಕ್ಕೆ ಸಂಬಂಧಿಸಿದಂತೆ ನಗರದ ಬುಡಾ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿವೇಶನಗಳ ಸರ್ವೆ ನಕ್ಷೆ ನೀಡುವುದನ್ನು ಕೈಬಿಡಬೇಕು ಎಂದರು.

ದಮ್ಮೂರು ಅವರು ಬುಡಾದಿಂದ ಈ ವರ್ಷ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಗೆ ವಿವರಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಜಿ. ಸೋಮಶೇಖರರೆಡ್ಡಿ, ಕೆ.ಸಿ. ಕೊಂಡಯ್ಯ, ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಮಾತನಾಡಿದರು. ತಹಶೀಲ್ದಾರ್ ನಾಗರಾಜ, ಭೂ ದಾಖಲೆಗಳ ಉಪನಿರ್ದೇಶಕರು ಸೇರಿ ಅಧಿಕಾರಿಗಳು ಇದ್ದರು.

ABOUT THE AUTHOR

...view details