ಕರ್ನಾಟಕ

karnataka

ಹಂಪಿಯಲ್ಲಿ ಬೋರ್​ವೆಲ್ ಕೊರೆದರೆ ಸ್ಮಾರಕಗಳಿಗೆ ಅಪಾಯವೇ...?

ಹಂಪಿಯ ರಾಣಿಸ್ನಾನಗೃಹದ ಪಾರ್ಕ್ ಗೆ ನೀರಿನ ಪೈಪ್ ಅಳವಡಿಸಲು ಬೋರ್ ವೆಲ್ ಕೊರಿಸಲಾಗುತ್ತಿದೆ. ಕಮಲಾಪುರ ಪಟ್ಟಣ ಪಂಚಾಯಿತಿಯು ಈ ಕಾಮಗಾರಿಯನ್ನು ಮಾಡುತ್ತಿದ್ದು, ಹಂಪಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಹಾಗೂ ಜಿಲ್ಲಾಧಿಕಾರಿಗಳಿಂದಲೂ ಅನುಮತಿ ಪಡೆದುಕೊಂಡಿದೆ. ಆದರೆ, ಯನೆಸ್ಕೋ ನಿಯಮಗಳನ್ನು ಮೀರಿ ಬೋರವೆಲ್ ಕೊರೆಸಲಾಗುತ್ತಿದೆ ಎಂಬುದು ಇತಿಹಾಸ ಪ್ರಿಯರು ಹಾಗೂ ಪ್ರವಾಸಿಗರ ನಿಲುವು.

By

Published : Sep 19, 2020, 6:10 PM IST

Published : Sep 19, 2020, 6:10 PM IST

Is Bore well digging in Hampi harmfull to monuments
ಹಂಪಿಯಲ್ಲಿ ಬೋರ್​ವೆಲ್ ಕೊರೆದರೆ ಸ್ಮಾರಕಗಳಿಗೆ ಅಪಾಯವೇ...?

ಹೊಸಪೇಟೆ:ಹಂಪಿಯ ಕೋಟೆಯ ಆಂಜನೇಯ ದೇವಸ್ಥಾನದ ಬಳಿ ಬೋರ್ ವೆಲ್ ಕೊರಿಸುತ್ತಿರುವುದು ವ್ಯಾಪಕ ಚರ್ಚೆಗೀಡಾಗಿದೆ.

ಹಂಪಿಯಲ್ಲಿ ಬೋರ್​ವೆಲ್ ಕೊರೆದರೆ ಸ್ಮಾರಕಗಳಿಗೆ ಅಪಾಯವೇ...?

ಹಂಪಿಯ ರಾಣಿಸ್ನಾನಗೃಹದ ಪಾರ್ಕ್ ಗೆ ನೀರಿನ ಪೈಪ್ ಅಳವಡಿಸಲು ಬೋರ್ ವೆಲ್ ಕೊರಿಸಲಾಗುತ್ತಿದೆ. ಕಮಲಾಪುರ ಪಟ್ಟಣ ಪಂಚಾಯಿತಿಯು ಈ ಕಾಮಗಾರಿಯನ್ನು ಮಾಡುತ್ತಿದ್ದು, ಹಂಪಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಹಾಗೂ ಜಿಲ್ಲಾಧಿಕಾರಿಗಳಿಂದಲೂ ಅನುಮತಿ ಪಡೆದುಕೊಂಡಿದೆ.

ಯನೆಸ್ಕೋ ನಿಯಮಗಳನ್ನು ಮೀರಿ ಬೋರ್ವೆಲ್ ಕೊರೆಸಲಾಗುತ್ತಿದೆ ಎಂಬುದು ಇತಿಹಾಸ ಪ್ರಿಯರು ಹಾಗೂ ಪ್ರವಾಸಿಗರ ನಿಲುವು. ಆದರೆ,‌ ಸ್ಮಾರಕಗಳಿಗೆ ಬೋರ್ ವೆಲ್ ಕೊರೆಸುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಅದಲ್ಲದೇ, ಅಧಿಕಾರಿಗಳು, ಪುರಾತತ್ವ ಹಾಗೂ ಜಿಲ್ಲಾಧಿಕಾರಿಗಳ‌‌ ಅನುಮತಿಯನ್ನು ಪಡೆಯಲಾಗಿದೆ ಎಂದು ಪಂಚಾಯಿತಿ ಸ್ಪಷ್ಟನೆ ನೀಡುತ್ತಿದೆ.

ABOUT THE AUTHOR

...view details