ಬಳ್ಳಾರಿ:ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತವು ಆಂತರಿಕ ವಿಚಾರ ಹಾಗೂ ಕಚ್ಚಾಟವಾಗಿದೆ. ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಬಳ್ಳಾರಿ ನಗರದ ಡಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗರ ಆಂತರಿಕ ಕಚ್ಚಾಟಕ್ಕೂ ನಮಗೂ ಸಂಬಂಧವಿಲ್ಲ. ಅವರವರು ಭಿನ್ನಾಭಿಪ್ರಾಯ ಮಾಡಿಕೊಂಡು ಹೊಡೆದಾಡಿಕೊಂಡು ಈ ಸರ್ಕಾರ ಬೀಳಿಸಲು ಕಾರಣರಾದ್ರೆ, ಅದಕ್ಕೆ ನಾವೇನು ಮಾಡಬೇಕು?. ಹಾಗೊಂದು ವೇಳೆ ಈ ಸರ್ಕಾರ ಪತನವಾದ್ರೆ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದರು.