ಹೊಸಪೇಟೆ:ನಗರದಲ್ಲಿ ಕಾಲು ಮುರಿತಗೊಂಡ ವ್ಯಕ್ತಿಯನ್ನು ಬೈಕ್ ಮೂಲಕ ಪುತ್ತೂರು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು! - ಹೊಸಪೇಟೆಯಲ್ಲಿ ಗಾಯಾಳುವನ್ನು ಬೈಕ್ ಮೇಲೆ ಕೊಂಡೊಯ್ದು ಆಸ್ಪತ್ರೆಗೆ ದಾಖಲು ಸುದ್ದಿ
ಹೊಸಪೇಟೆಯಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ಬಾರದ ಕಾರಣ ಬೈಕ್ ಮೇಲೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಬೈಕ್ನಲ್ಲಿ ಬಿದ್ದು ಗಾಯಗೊಂಡಿದ್ದ ಹಿಂಬದಿ ಸವಾರನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಲಭ್ಯವಾಗಿಲ್ಲ. ತೀವ್ರ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಬೈಕ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಬಂಧಿಯೊಬ್ಬರ ಮದುವೆಗೆ ಪರವಾನಗಿ ಪಡೆಯಲು ಹೊಸಪೇಟೆ ತಹಶೀಲ್ದಾರ್ ಕಚೇರಿಗೆ ಬಂದಿದ್ದ ವೇಳೆ ಘಟನೆ ಜರುಗಿದೆ.
ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳನ್ನ ಸಂಪೂರ್ಣವಾಗಿ ನಿಷೇಧಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ. ಆದರೂ ಸಹ ಪರವಾನಗಿ ಪಡೆದುಕೊಳ್ಳಲು ಬಂದಾಗ ದುರ್ಘಟನೆ ಸಂಭವಿಸಿದೆ.