ಹೊಸಪೇಟೆ :ಭಾರತ ಪುರುಷ ಪ್ರಧಾನ ದೇಶವಲ್ಲ. ಸ್ತ್ರೀ ಪ್ರಧಾನ ದೇಶವಾಗಿದೆ. ಜಗತ್ತಿನಲ್ಲಿ ಭಾರತ ದೇಶ ಹೆಣ್ಣನ್ನು ದೇವತೆ ಸ್ಥಾನದಲ್ಲಿ ನೋಡುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾರತ ಪುರುಷ ಪ್ರಧಾನ ದೇಶವಲ್ಲ: ನಳಿನ್ ಕುಮಾರ್ ಕಟೀಲ್ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿದರು. ಭಾರತೀಯ ಜನತಾ ಪಾರ್ಟಿ ಸ್ವದೇಶಿ ಪರಿಕಲ್ಪನೆ ಹೊಂದಿದೆ.
ಪಕ್ಷ ದೇಶೀಯ ಸಂಸ್ಕೃತಿ ಚಿಂತನೆ ಮಾಡುತ್ತದೆ. ಪಕ್ಷದಲ್ಲಿ ಮಹಿಳೆಯರಿಗೆ ಸ್ಥಾನಮಾನವನ್ನು ನೀಡಿದೆ. 2009ರಲ್ಲಿ ಯುಪಿಎ ಸರ್ಕಾರವಿತ್ತು. ಆಗ ಪ್ರಧಾನಿ ಮನಮೋಹನ್ ಸಿಂಗ್ ಇದ್ದರು. ವಿರೋಧ ಪಕ್ಷದ ನಾಯಕಿಯನ್ನಾಗಿ ಸುಷ್ಮಾ ಸ್ವರಾಜ್ ಅವರನ್ನು ಮಾಡಲಾಗಿತ್ತು ಎಂದರು.
ಜಗತ್ತಿನಲ್ಲಿ ಪರಿವರ್ತನೆಯಾಗುತ್ತಿದೆ. ಅಮೆರಿಕಾದಲ್ಲಿ ಬೈಡನ್ ಮಂತ್ರಿ ಮಂಡಲ ರಚನೆಯಾಗಿದೆ. ಅದರಲ್ಲಿ 14 ಜನ ಭಾರತೀಯ ಮೂಲದವರು. ಈಗ ಕೇಂದ್ರ ಸರ್ಕಾರದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡಲಾಗಿದೆ. ಇಡೀ ದೇಶ ನರೇಂದ್ರ ಮೋದಿ ಅವರ ಜತೆಗೆ ಇದೆ. ಮಗುವಿನಲ್ಲೂ ಪರಿವರ್ತನೆಯನ್ನು ಮಾಡಿದ್ದು ಮೋದಿ.
ಕಾಂಗ್ರೆಸ್ ಪಕ್ಷ ಇಲ್ಲದಂತಾಗಿದೆ. ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ. ಇದು ನರೇಂದ್ರ ಮೋದಿ ಅವರ ಆಡಳಿತದ ಪರಿಣಾಮ. ಕೊರೊನಾ ಲಸಿಕೆ ನೀಡಿದ್ದಕ್ಕೆ ಬ್ರೆಜಿಲ್ ಧನ್ಯವಾದ ಹೇಳುತ್ತಿದೆ. ಈ ಹಿಂದೆ ಭಿಕ್ಷೆಯನ್ನು ಬೇಡುತ್ತಿತ್ತು. ಆದರೆ, ಈಗ ಭಿಕ್ಷೆಯನ್ನು ನೀಡುತ್ತಿದೆ ಎಂದರು.
ಜಾತಿವಾರು, ಭ್ರಷ್ಟಾಚಾರ ಮಾಡಿದ್ದರಿಂದ ಕಾಂಗ್ರೆಸ್ ಅವನತಿಯತ್ತ ಹೋಗಿದೆ. ಹಾಗಾಗಿ, ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಗಾಂಧೀಜಿ ಹಾಗೂ ಸ್ವಾತಂತ್ರ್ಯದ ಪುಣ್ಯ ಕಾಂಗ್ರೆಸ್ನವರಿಗೆ ಸಿಕ್ಕಿತ್ತು. ಈಗ ಕಾಂಗ್ರೆಸ್ ಆಡಳಿತದಿಂದ ಜನರು ಬೇಸತ್ತಿದ್ದಾರೆ ಎಂದರು.