ಹೊಸಪೇಟೆ :ನಗರದ ಕನಕದಾಸರ ವೃತ್ತದ ಬಳಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಅಮೃತ ಯೋಜನೆಯಡಿ ಸ್ವಾತಂತ್ರ್ಯ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ಕೆಂಪು ಕೋಟೆಯ ಮಾದರಿ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ. ಶಾಸಕರ ಹಾಗೂ ಬೇರೆ ಬೇರೆ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. 1.5. ಎಕೆರೆಯಲ್ಲಿ ಉದ್ಯಾನವನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ವರ್ಷದ ಹಿಂದೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಈಗಾಗಲೇ ಉದ್ಯಾನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇನ್ನು, ಆರು ತಿಂಗಳಿನಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿ ನೆನಪಿಸುವ ಕಾರ್ಯ ಇದಾಗಿದೆ. ಕೇವಲ ಪ್ರತಿಭಟನೆಗೆ ಈ ಉದ್ಯಾನವನ ಸೀಮಿತವಲ್ಲ. ಬೆಂಗಳೂರಿನ ಪ್ರೀಡಂ ಪಾರ್ಕ್ ಬೇರೆ. ಹೊಸಪೇಟೆಯಲ್ಲಿನ ಬೇರೆ ಎಂಬುದು ನಗರಸಭೆಯ ಅಧಿಕಾರಿಗಳ ಮಾತು.