ಹೊಸಪೇಟೆ:ತುಂಗಭದ್ರಾ ಜಲಾಶಯದಿಂದ ಸೋಮವಾರ ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಟ್ಟಿದ್ದರಿಂದ, ತಾಲೂಕಿನ ಹಂಪಿಯ ನದಿ ಭಾಗದ ಕೆಲ ಸ್ಮಾರಕಗಳು ಮುಳಗಡೆಗೊಂಡಿವೆ.
ತುಂಗಭದ್ರಾ ಜಲಾಶಯದ ಹೊರ ಹರಿವು ಹೆಚ್ಚಳ: ಹಂಪಿ ಸ್ಮಾರಕಗಳು ಮುಳಗಡೆ
ಹಂಪಿಯ ನದಿ ಪಾತ್ರದ ಜನಿವಾರ ಮಂಟಪ, ನಂದಿ ವಿಗ್ರಹ, ಪುರಂದರ ಮಂಟಪ ಸೇರಿದಂತೆ ನದಿ ಅಂಚಿನಲ್ಲಿರುವ ಕೆಲ ಸ್ಮಾರಕಗಳು ಮಳೆ ನೀರಿನಲ್ಲಿ ಮುಳಗಡೆಯಾಗಿವೆ.
ಹಂಪಿ ಸ್ಮಾರಕಗಳು ಮುಳಗಡೆ
ಹಂಪಿಯ ನದಿ ಪಾತ್ರದ ಜನಿವಾರ ಮಂಟಪ, ನಂದಿ ವಿಗ್ರಹ, ಪುರಂದರ ಮಂಟಪ ಸೇರಿದಂತೆ ನದಿ ಅಂಚಿನಲ್ಲಿರುವ ಕೆಲ ಸ್ಮಾರಕಗಳು ನೀರಿನಲ್ಲಿ ಮುಳಗಡೆಯಾಗಿವೆ. ವಿರೂಪಾಕ್ಷೇಶ್ವರ ಎಡಭಾಗದಲ್ಲಿರುವ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾಗಾಗಿ ಬೋಟ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ವಿರುಪಾಪುರ ಸಂಪರ್ಕ ಕಡಿತಗೊಂಡಿದೆ.