ಕರ್ನಾಟಕ

karnataka

By

Published : Jul 3, 2020, 1:04 PM IST

ETV Bharat / state

ಕಲ್ಯಾಣ ಕರ್ನಾಟಕದ 'ಆರೋಗ್ಯ ರಕ್ಷಾ ಕವಚ'ಕ್ಕೆ ಕಪ್ಪು ಚುಕ್ಕಿ... ವಿಮ್ಸ್​ನಲ್ಲಿ ಹೆಚ್ಚಿದ ಸಾವಿನ ಸಂಖ್ಯೆ

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯ ಹೆಚ್ಚಳ ಹಿಂದೆ ಏನು ಕಾರಣ ಇರಬಹುದೆಂದು ಜಿಲ್ಲಾಡಳಿತ ವಿಮ್ಸ್ ಆಸ್ಪತ್ರೆಗೆ ರಾಯಚೂರು, ಕೊಪ್ಪಳ ಹಾಗೂ ಜಿಲ್ಲೆಯ ನಾನಾ ತಾಲೂಕುಗಳಿಂದ, ಹಾಗೂ ನೆರೆಯ ಆಂಧ್ರಪ್ರದೇಶದ ಕರ್ನೂಲ್, ಅನಂತಪುರ ಜಿಲ್ಲೆಯ ನಾನಾ ಗಡಿಗ್ರಾಮಗಳಿಂದಲೂ ಕೂಡ ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ಜನರು ಬರುತ್ತಾರೆ. ಆದರೆ, ಸಾವಿನ ಸಂಖ್ಯೆ ಹೆಚ್ಚಾಗಿರುವುದು ಇಲ್ಲಿಗೆ ಬರುವ ರೋಗಿಗಳ ಆತಂಕಕ್ಕೆ ಕಾರಣವಾಗಿದೆ.

ವಿಮ್ಸ್ ಆಸ್ಪತ್ರೆಯಲ್ಲೇ ಹೆಚ್ಚಿದ ಸೋಂಕಿತರ ಸಾವು
ವಿಮ್ಸ್ ಆಸ್ಪತ್ರೆಯಲ್ಲೇ ಹೆಚ್ಚಿದ ಸೋಂಕಿತರ ಸಾವು

ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ಅವಳಿ ಜಿಲ್ಲೆಗಳ ಹಾಗೂ ನೆರೆಯ ಆಂಧ್ರಪ್ರದೇಶದ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಆರೋಗ್ಯ ರಕ್ಷಣಾ ಕವಚವೆಂದೇ ಖ್ಯಾತಿಯಾಗಿರುವ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲೇ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ವಿಮ್ಸ್ ಆಸ್ಪತ್ರೆಗೆ ರಾಯಚೂರು, ಕೊಪ್ಪಳ ಹಾಗೂ ಜಿಲ್ಲೆಯ ನಾನಾ ತಾಲೂಕುಗಳಿಂದ, ಹಾಗೂ ನೆರೆಯ ಆಂಧ್ರಪ್ರದೇಶದ ಕರ್ನೂಲ್, ಅನಂತಪುರ ಜಿಲ್ಲೆಯ ನಾನಾ ಗಡಿಗ್ರಾಮಗಳಿಂದಲೂ ಕೂಡ ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ಜನರು ಬರುತ್ತಾರೆ. ಆದರೆ, ಸಾವಿನ ಸಂಖ್ಯೆ ಹೆಚ್ಚಾಗಿರುವುದು ಇಲ್ಲಿಗೆ ಬರುವ ರೋಗಿಗಳ ಆತಂಕಕ್ಕೆ ಕಾರಣವಾಗಿದೆ.

ವಿಮ್ಸ್ ಆಸ್ಪತ್ರೆಯಲ್ಲೇ ಹೆಚ್ಚಿದ ಸೋಂಕಿತರ ಸಾವು

ಗಣಿಜಿಲ್ಲೆಯಲ್ಲಿ ಈವರೆಗೆ 33 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪೈಕಿ 22 ಮಂದಿ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದರು. ಕೋವಿಡ್ ಪರೀಕ್ಷೆಗೆ ಒಳಪಡಿಸಿ, ಆ ಪರೀಕ್ಷಾ ವರದಿಯು ಬರುವುದಕ್ಕೂ ಮುಂಚೆಯೇ ಸಾವಿಗೀಡಾಗುತ್ತಿರುವುದು ವಿಮ್ಸ್ ಆಡಳಿತ ಮಂಡಳಿಯನ್ನೇ ಪ್ರಶ್ನಿಸುವಂತಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯ ಹೆಚ್ಚಳ ಹಿಂದೆ ಏನು ಕಾರಣ ಇರಬಹುದೆಂದು ಜಿಲ್ಲಾಡಳಿತ ತಲೆಕೆಡಿಸಿಕೊಂಡಿದೆ. ವಿಮ್ಸ್ ಆಸ್ಪತ್ರೆಯಲ್ಲೇ ಈ ಸಾವು ಹೆಚ್ಚಾಗಿರುವುದರಿಂದ ವಿಮ್ಸ್ ಆಡಳಿತ ಮಂಡಳಿ ವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಅನುಮಾನ ವ್ಯಕ್ತಪಡಿಸಿದೆ. ಜಿಲ್ಲೆಯಲ್ಲಿ ಈವರೆಗೂ ಸಾವಿನ ಸಂಖ್ಯೆಯಲ್ಲಿ ಸಿಂಹಪಾಲನ್ನು ವಿಮ್ಸ್ ಆಸ್ಪತ್ರೆ ಹೊಂದಿದೆ.‌

ಜಿಲ್ಲಾ ಉಸ್ತುವಾರಿ ಸಚಿವರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಸಚಿವ ಆನಂದಸಿಂಗ್ ವಿಮ್ಸ್ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ವಿಶೇಷ ತಂಡ ರಚನೆ ಮಾಡಿದ್ದು, ಸಾವಿಗೆ ನಿಖರ ಕಾರಣ ಕಂಡು ಹಿಡಿಯಲು ಮುಂದಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ಮಂಜುನಾಥ ಹಾಗೂ ತಹಶೀಲ್ದಾರ್​​ ವಿಶ್ವಜಿತ್​ ಮೆಹ್ತಾ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details