ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಸಂಜೆ ನದಿಗೆ 48,800 ಕ್ಯೂಸೆಕ್ ನೀರನ್ನು ಹರಿ ಬಿಡಲಾಯಿತು.
ತುಂಗಭದ್ರಾ ಒಳಹರಿವು ಹೆಚ್ಚಳ: ನದಿಗೆ 48,800 ಕ್ಯೂಸೆಕ್ ನೀರು... - Tungabhadra Reservoir
ಹೊಸಪೇಟೆ ತುಂಗಭದ್ರಾ ಜಲಾಶಯದ 22 ಕ್ರಸ್ಟ್ ಗೇಟ್ ಮೂಲಕ ಸಂಜೆ ನದಿಗೆ 48,800 ಕ್ಯೂಸೆಕ್ ನೀರನ್ನು ಹರಿ ಬಿಡಲಾಯಿತು.
2 ಅಡಿ ಎತ್ತರದಲ್ಲಿ 10 ಕ್ರಸ್ಟ್ ಗೇಟ್ ಹಾಗೂ 1 ಅಡಿ ಎತ್ತರದಲ್ಲಿ 10 ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರನ್ನು ಹರಿಸಲಾಗುತ್ತಿದೆ. ಜಲಾಶಯಕ್ಕೆ 46,886 ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿದೆ. ಸದ್ಯ ಜಲಾಶಯದಲ್ಲಿ 1632.97 ಅಡಿ ಇದ್ದು, 100.740 ಟಿಎಂಸಿ ಸಂಗ್ರಹವಾಗಿದೆ.
ಭದ್ರಾ ಮತ್ತು ತುಂಗಾ ಅಣೆಕಟ್ಟುಗಳು ಮತ್ತು ಮಧ್ಯಂತರ ಜಲಾನಯನ ಪ್ರದೇಶಗಳ ಒಳಹರಿವು ಹೆಚ್ಚಳವಾಗಿದೆ. ಹಾಗಾಗಿ ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಾಗಿದೆ. ತುಂಗಭದ್ರಾ ಜಲಾಶಯಕ್ಕೆ ಸೆ.21 ರಂದು ಬೆಳಿಗ್ಗೆ 10ಕ್ಕೆ 1.30 ಲಕ್ಷ ಕ್ಯೂಸೆಕ್ ಅಥವಾ 1.40 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತುಂಗಭದ್ರಾ ಜಲಾಶಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.