ಕರ್ನಾಟಕ

karnataka

ETV Bharat / state

ಕೆ.ಎಸ್.ಒ.ಯು ಬಳ್ಳಾರಿ ಪ್ರಾದೇಶಿಕ ಕೇಂದ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ: ಡಾ.ಹೆಚ್ ಮಲ್ಲಿಕಾರ್ಜುನ್​ - KSOU

ಬಳ್ಳಾರಿಯ ಕೆ.ಎಸ್.ಒ.ಯು ಪ್ರಾದೇಶಿಕ ಕೇಂದ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಜಿ, ಡಿಪ್ಲೊಮಾ ಕೋರ್ಸ್ ಗಳು ಇವೆ. ಅದರ ಸದುಪಯೋಗವನ್ನು ಅಭ್ಯರ್ಥಿಗಳು ಪಡೆದುಕೊಳ್ಳಿ ಎಂದು ನಿರ್ದೇಶಕ ಡಾ.ಹೆಚ್ ಮಲ್ಲಿಕಾರ್ಜುನ ಹೇಳಿದ್ದಾರೆ.

Increase in number of candidates at KSOU Bellary Regional Center
ಕೆ.ಎಸ್.ಓ.ಯು ಬಳ್ಳಾರಿ ಪ್ರಾದೇಶಿಕ ಕೇಂದ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ

By

Published : Feb 14, 2021, 12:54 PM IST

ಬಳ್ಳಾರಿ: 2020 - 21ನೇ ಸಾಲಿನಲ್ಲಿ ಕೊರೊನಾ ವೈರಸ್​ನಿಂದ ಹಿಂದಿನ ವರ್ಷಕ್ಕಿಂತ ಈ ವರ್ಷ ಎರಡು ಪಟ್ಟು ಅಭ್ಯರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಯ ಪ್ರವೇಶವನ್ನು ಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಹೆಚ್ ಮಲ್ಲಿಕಾರ್ಜುನ ಹೇಳಿದ್ದಾರೆ.

ಕೆ.ಎಸ್..ಯು ಬಳ್ಳಾರಿ ಪ್ರಾದೇಶಿಕ ಕೇಂದ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ

ನಗರದಲ್ಲಿ ಮಾತನಾಡಿದ ಅವರು, ಕೊರೊನಾದಿಂದ ನೂರಾರು ಯುವಕ, ಯುವತಿಯರು, ಉದ್ಯೋಗಸ್ಥರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನ ಪ್ರಾದೇಶಿಕ ಕೇಂದ್ರ ಬಳ್ಳಾರಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪ್ರವೇಶವನ್ನು ಪಡೆದಿದ್ದಾರೆ.

ಕೆ.ಎಸ್.ಒ.ಯು ಬಳ್ಳಾರಿ ಪ್ರಾದೇಶಿಕ ಕೇಂದ್ರದಲ್ಲಿ 31 ಕೋರ್ಸ್​ಗಳಿವೆ. ಪ್ರಾದೇಶಿಕ ಕೇಂದ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಹಾಗೂ18 ಅಭ್ಯರ್ಥಿಗಳು ಕೆಪಿಎಸ್​ಸಿಯಲ್ಲಿ ಎಸ್​ಡಿಎ, ಎಫ್​ಡಿಎಗೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details