ಬಳ್ಳಾರಿ:ಜೆಎಸ್‌ಡಬ್ಲ್ಯೂ ಸಮೂಹವು ಬಳ್ಳಾರಿಯ ತೋರಣಗಲ್ಲಿನಲ್ಲಿ 1000 ಹಾಸಿಗೆಗಳ ಆಮ್ಲಜನಕಯುಕ್ತ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಯನ್ನು ಪ್ರಾರಂಭಿಸಿದೆ. ಈ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆನ್ಲೈನ್ (ವರ್ಚುವಲ್) ಮೂಲಕ ಉದ್ಘಾಟಿಸಿದರು.
ಈ ಬೃಹತ್ ಆಸ್ಪತ್ರೆಯು ಭಾರತದ ಅತಿದೊಡ್ಡ ಕೋವಿಡ್ ಕೇರ್ ಸೌಲಭ್ಯಗಳಲ್ಲಿ ಒಂದಾಗಿದ್ದು, ಸೊಂಕಿತರಿಗೆ ನಿರಂತರವಾಗಿ ಆಮ್ಲಜನಕವನ್ನು ಪೂರೈಸಲು ಜೆ.ಎಸ್.ಡಬ್ಲ್ಯೂ. ಉಕ್ಕಿನ ಸ್ಥಾವರದಿಂದ 4.8 ಕಿ.ಮೀ. ಪೈಪ್ಲೈನ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲ ಸೌಕರ್ಯವನ್ನು 15 ದಿನಗಳ ದಾಖಲೆಯ ಅವಧಿಯಲ್ಲಿ ನಿರ್ಮಿಸಲಾಗಿದೆ. ಜೆಎಸ್‌ಡಬ್ಲ್ಯೂ ಸಮೂಹವು ಬಳ್ಳಾರಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಈ ಬೃಹತ್ ವೈದ್ಯಕೀಯ ಸೌಲಭ್ಯ ರಚಿಸಿ ಭಾರತೀಯರಿಗೆ ಸಮರ್ಪಿಸಿದೆ. ಈ ಕೋವಿಡ್ ಆಸ್ಪತ್ರೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರ್ವಹಿಸಲಿದೆ.
ಹೊಸದಾಗಿ ನಿರ್ಮಿಸಿದ ವೈದ್ಯಕೀಯ ಸೌಲಭ್ಯದ ಬಗ್ಗೆ ಪ್ರತಿಕ್ರಿಯಿಸಿದ ಜೆಎಸ್‌ಡಬ್ಲ್ಯೂ ಫೌಂಡೇಶನ್ನ ಅಧ್ಯಕ್ಷೆ ಶ್ರೀಮತಿ ಸಂಗೀತಾ ಜಿಂದಾಲ್, ಪ್ರಸ್ತುತವಾಗಿ ಭಾರತವು ಕೋವಿಡ್ನ ಎರಡನೇ ಅಲೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದೆ. ಇದು ದೇಶದ ಜನರ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಿಂದೆಂದು ಕಾಣದಂತೆ ಕೊರೊನಾ ಸೊಂಕಿತರ ಸಂಖ್ಯೆ ಹಾಗೂ ಸಾವು-ನೋವುಗಳು ಹೆಚ್ಚಾಗುತ್ತಿದೆ ಎಂದರು.
ದೇಶದ ದೀರ್ಘಕಾಲದ ವೈದ್ಯಕೀಯ ಸೌಲಭ್ಯಗಳ ಕೊರತೆ, ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಯ (ಬೆಡ್) ಬೇಡಿಕೆ ಮತ್ತು ತೀವ್ರವಾದ ಆಮ್ಲಜನಕದ ಕೊರತೆಯನ್ನು ಮನಗೊಂಡು ಜೆಎಸ್‌ಡಬ್ಲ್ಯೂ ಸಮೂಹವು ತಕ್ಷಣವೇ ಈ ಕೊರತೆಗಳನ್ನು ನೀಗಿಸಲು ಬೃಹತ್ ಕೋವಿಡ್ ಕೇರ್ ಆಸ್ಪತ್ರೆ ನಿರ್ಮಿಸಿದೆ ಎಂದರು.
ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿನ ತೋರಣಗಲ್ಲಿನಲ್ಲಿರುವ ಭಾರತದ ಅತಿದೊಡ್ಡ ಉಕ್ಕು ಉತ್ಪಾದನಾ ಕೇಂದ್ರವಾದ ಜೆಎಸ್‌ಡಬ್ಲ್ಯೂ ಸ್ಟೀಲ್ 1000 ಹಾಸಿಗೆಗಳ ಬೃಹತ್ ಆಮ್ಲಜನಕಯುಕ್ತ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಯನ್ನು ನಿರ್ಮಿಸಿದೆ. ಈ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುವುದು ಮತ್ತು ಕೋವಿಡ್ ಪ್ರಕರಣಗಳನ್ನು ಕಡಿಮೆ ಮಾಡುವ ಸರ್ಕಾರದ ಪ್ರಯತ್ನಗಳಿಗೆ ಸಂಸ್ಥೆ ಬೆಂಬಲಿಸುತ್ತದೆ ಎಂದರು ಹೇಳಿದರು.
ಜೆಎಸ್‌ಡಬ್ಲ್ಯೂ ಸಮೂಹದ ಅಧ್ಯಕ್ಷ ಸಜ್ಜನ್ ಜಿಂದಾಲ್, ಮುಖ್ಯಮಂತ್ರಿ, ಕರ್ನಾಟಕದ ಹಿರಿಯ ಮಂತ್ರಿಗಳು, ರಾಜ್ಯ ಮತ್ತು ಜಿಲ್ಲಾಡಳಿತದ ಸದಸ್ಯರ ಬೆಂಬಲವನ್ನು ಅಂಗೀಕರಿಸಿದರು. ವೈದ್ಯರು, ದಾದಿಯರು ಮತ್ತು ಕೋವಿಡ್ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು. ಮಾನವ ಉಳಿವಿನ ಈ ಆತಂಕಕಾರಿ ಮತ್ತು ನಿರ್ಣಾಯಕ ಹಂತದಲ್ಲಿ ಜೆಎಸ್‌ಡಬ್ಲ್ಯೂ ಮಾನವಕುಲದ ಸೇವೆಗಾಗಿ ತನ್ನ ಸಾಮರ್ಥ್ಯದಲ್ಲಿ ಎಲ್ಲವನ್ನೂ ಮಾಡಲು ಬಯಸುತ್ತದೆ. ಪ್ಲಾಂಟ್‌ನಿಂದ ರೋಗಿಗೆ ನೇರ ಆಮ್ಲಜನಕದ ಪೂರೈಕೆ ಮಾಡಲು ಆಸ್ಪತ್ರೆಯನ್ನು ನಿರ್ಮಿಸಿದ್ದೇವೆ ಎಂದು ಸಜ್ಜನ್ ಜಿಂದಾಲ್ ಹೇಳಿದರು.
ನೇರ ಆಮ್ಲಜನಕ ಪೂರೈಕೆ...