ಹೊಸಪೇಟೆ: ಗಂಧದ ತುಂಡುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ನಗರದ ಗ್ರಾಮೀಣ ಠಾಣೆ ಪೊಲೀಸರು, ಬಂಧಿತರಿಂದ 51 ಸಾವಿರ ರೂ. ಬೆಲೆ ಬಾಳುವ ಗಂಧದ ತುಂಡು ಹಾಗೂ ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಶ್ರೀಗಂಧ ಸಾಗಾಣಿಕೆ: ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು - ಶ್ರೀಗಂಧ ಸಾಗಾಣಿಕೆ
ಗಂಧದ ತುಂಡಗಳನ್ನು ಸಾಗಣಿಕೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ನಗರದ ಗ್ರಾಮೀಣ ಠಾಣೆ ಪೊಲೀಸರು, ಬಂಧಿತರಿಂದ 51 ಸಾವಿರ ರೂ. ಬೆಲೆ ಬಾಳುವ ಗಂಧದ ತುಂಡು ಹಾಗೂ ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಶ್ರೀಗಂಧ ಸಾಗಾಣಿಕೆ
ಸಂಡೂರು ರಸ್ತೆ ಕಡೆಯಿಂದ ಗಂಧದ ಕಳ್ಳತನ ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದ, ವೆಂಕಟಗಿರಿ ತಾಂಡದ ನಿವಾಸಿ ಚಂದ್ರ ನಾಯ್ಕ ಹಾಗೂ ವೆಂಕಟಗಿರಿ ಕ್ಯಾಂಪ್ ನಿವಾಸಿ ಕುಮಾರ ನಾಯ್ಕ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 36,600 ರೂ. ಬೆಲೆ ಬಾಳುವ 18.40 ಕೆ.ಜಿತೂಕದ ಗಂಧದ ತುಂಡುಗಳು ಹಾಗೂ 15 ಸಾವಿರ ರೂ. ಬೆಲೆ ಬಾಳುವ ಬೈಕ್ ವಶಪಡಿಸಿಕೊಂಡಿದ್ದಾರೆ.ಗ್ರಾಮೀಣ ಠಾಣೆಯ ಪಿಐ ಶ್ರೀನಿವಾಸ ಮೇಟಿ, ಪಿಎಸ್ಐ ಬಸವರಾಜ, ಎಎಸ್ಐ ಸುರೇಶ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇಧಿಸಿದ್ದಾರೆ.