ಬಳ್ಳಾರಿ:ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಳೆದೊಂದು ತಿಂಗಳಿಂದ ಸರ್ಕಾರದ ಆದಾಯದ ಮೂಲಕ್ಕೆ ಕತ್ತರಿ ಬಿದ್ದಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಚಟುವಟಿಕೆಗಳಿಗೆ ತಾತ್ಕಾಲಿಕ ಕಡಿವಾಣ ಹಾಕಿರುವ ಅಬಕಾರಿ ಅಧಿಕಾರಿಗಳು ಮದ್ಯ ಪೂರೈಕಾ ಕೇಂದ್ರಗಳತ್ತ ಹದ್ದಿನ ಕಣ್ಣಿಟ್ಟಿದ್ದಾರೆ. ಒಂದು ತಿಂಗಳೊಳಗೆ ಸುಮಾರು 1.70 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಮದ್ಯದ ದಾಸ್ತಾನು ಹಾಗೂ 489 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆ ಉಪಆಯುಕ್ತ ಜಗದೀಶ ನಾಯ್ಕ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಅಂದಾಜು 2,22,21,825 ಲೀಟರ್ ಐಎಂಎಲ್, 1109.720 ಬಿಯರ್ ಸೇರಿದಂತೆ ಒಟ್ಟಾರೆ 1,35,17, 759 ಮದ್ಯದ ಬಾಟಲ್ ಹಾಗೂ 26 ಲೀಟರ್ ಸೇಂದಿಯನ್ನ ಜಪ್ತಿಗೊಳಿಸಲಾಗಿದೆ ಎಂದು ನಾಯ್ಕ್ ಮಾಹಿತಿ ನೀಡಿದರು.
ವಾಹನಗಳ ಜಪ್ತಿ:
ಜಿಲ್ಲೆಯ ಆಯಾ ತಾಲೂಕಿನಾದ್ಯಂತ ಸುಮಾರು 51 ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ ವಾಹನ ಹಾಗೂ ಭಾರಿ ಸರಕು ಸಾಗಣೆ ವಾಹನವನ್ನ ಜಪ್ತಿಗೊಳಿಸಲಾಗಿದೆ ಎಂದು ಇಲಾಖೆ ಹೇಳಿದೆ.