ಕರ್ನಾಟಕ

karnataka

ETV Bharat / state

ಗಣಿನಗರಿಯಲ್ಲಿ ಅನಧಿಕೃತ ಲೇಔಟ್; ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ! - ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ

ವಾಸ್ತವವಾಗಿ, ಈ ಜಾಗ ಹಳ್ಳಕ್ಕೆ ಸೇರಿದ್ದು ಅಥವಾ ಲೇಔಟ್ ಮಾಲೀಕರದ್ದೊ ಎಂಬುವುದನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆ ಖಚಿತಪಡಿಸಬೇಕಿದೆ. ಮುಂಡರಗಿ ಲೇಔಟ್ ಇದೇ ಮಾರ್ಗದಲ್ಲಿ ಬರೋದರಿಂದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಉಳಿದ ಅಧಿಕಾರಿವರ್ಗ ಈ ಬಗ್ಗೆ ಕಿಂಚಿತ್ತೂ ಕಾಳಜಿವಹಿಸಿಲ್ಲ.‌

illegal-layout-across-bellary-city-officer-not-care
ಗಣಿನಗರಿಯಲ್ಲಿ ಅನಧಿಕೃತ ಲೇಔಟ್, ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ

By

Published : Sep 19, 2020, 2:20 PM IST

ಬಳ್ಳಾರಿ: ಗಣಿನಗರಿ ಬಳ್ಳಾರಿ ನಗರದಾದ್ಯಂತ ಅನಧಿಕೃತ ಲೇಔಟ್‌ಗಳು ಚಿಗುರೊಡೆಯುತ್ತಿವೆ.‌ ಅದನ್ನ ತಡೆಯಬೇಕಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪವು ಸಹ ಕೇಳಿಬಂದಿದೆ.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮುಂಡರಗಿ ಹಳ್ಳದ ಪಕ್ಕದಲ್ಲೇ ಈ ಅನಧಿಕೃತ ಲೇಔಟ್ ತಲೆ ಎತ್ತಿದೆ.‌ ಆ ಹಳ್ಳದ ಒಂದು ಭಾಗದಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ರೈತಾಪಿ ವರ್ಗ ಹಾಗೂ ಕೃಷಿ ಕೂಲಿಕಾರ್ಮಿಕರು ತಮ್ಮ‌ ಜೀವನದ ಬುತ್ತಿಯನ್ನ ತುಂಬಿಸಿಕೊಳ್ಳಲು ಹೆಣಗಾಡುತ್ತಿದ್ದರೆ. ಮತ್ತೊಂದೆಡೆ ಹಳ್ಳದ ಪಕ್ಕದಲ್ಲೇ ದೊಡ್ಡದಾದ ಕಾಂಪೌಂಡ್ ಗೋಡೆಯನ್ನ ನಿರ್ಮಿಸಿ ಲೇಔಟ್ ಮಾಡಲು ಪ್ರಭಾವಿ ರಾಜಕಾರಣಿಗಳ ಯುವ ಮುಖಂಡರು ಮುಂದಾಗಿದ್ದಾರೆ.

ವಾಸ್ತವವಾಗಿ, ಈ ಜಾಗ ಹಳ್ಳದ್ದೂ ಅಥವಾ ಲೇಔಟ್ ಮಾಲೀಕರದ್ದೊ ಎಂಬುವುದನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಮತ್ತು ಕಂದಾಯ ಇಲಾಖೆ ಖಚಿತಪಡಿಸಬೇಕಿದೆ. ಮುಂಡರಗಿ ಲೇಔಟ್ ಇದೇ ಮಾರ್ಗದಲ್ಲಿ ಬರೋದರಿಂದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಉಳಿದ ಅಧಿಕಾರಿವರ್ಗ ಈ ಬಗ್ಗೆ ಕಿಂಚಿತ್ತೂ ಕಾಳಜಿವಹಿಸಿಲ್ಲ.‌

ಲೇಔಟ್ ಅಧಿಕೃತ ಅಥವಾ‌ ಅನಧಿಕೃತನಾ ಎಂಬುವುದನ್ನು ಪತ್ತೆ ಹಚ್ಚಲು ಈ ಎಲ್ಲಾ ಅಧಿಕಾರಿವರ್ಗ ವಿಫಲವಾಗಿದೆ.‌ ಅಸಲಿಗೆ ಹಳ್ಳದ ಜಾಗ ಒತ್ತುವರಿಯಾಗಿದೆಯಾ ಅಥವಾ ಇಲ್ಲವೋ ಎಂಬುದನ್ನ ಪರಿಶೀಲಿಸುವ ಮನಸ್ಸನ್ನೂ ಕೂಡ ಇಲ್ಲಿ ಕನಿಷ್ಠ ಪಕ್ಷ ಮಾಡಿಯೇ ಇಲ್ಲ ಎಂದು ಮುಂಡರಗಿ ನಿವಾಸಿಗಳು ದೂರಿದ್ದಾರೆ.

ಮುಂಡರಗಿಯ ಕೆಲವರನ್ನ ಈ ಕುರಿತು ಮಾಹಿತಿ ಕೇಳಿದರೆ ಲೇಔಟ್ ಮಾಲೀಕರದ್ದೇ ಈ ಜಾಗ ಎಂದಿದ್ದಾರೆ. ಪಕ್ಕದಲ್ಲಿ ಹಳ್ಳ ಇದೆಯಲ್ಲ ಎಂದಾಗ, ಅದು ಕೂಡ ಈ ಜಾಗದಲ್ಲೇ ಬರುತ್ತೆ. ಅದು ಹೇಗೆ ಲೇಔಟ್ ಮಾಡಿದ್ರೋ ನಮಗಂತೂ ಗೊತ್ತಿಲ್ಲ ಅಂತಿದ್ದಾರೆ.

ABOUT THE AUTHOR

...view details