ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ಪೊಲೀಸ್ ಠಾಣಾ ಸಿಪಿಐ ಕಚೇರಿಗೆ ಇಂದು ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಭೇಟಿ ನೀಡಿ, ಸಿರುಗುಪ್ಪ ನಗರವು ಸೂಕ್ಷ್ಮವಾಗಿದ್ದು, ಜನತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕೆಂದು ಕೋರಿದ್ದಾರೆ.
ಸಿರುಗುಪ್ಪ ಪೊಲೀಸ್ ಠಾಣೆಗೆ ಐಜಿಪಿ ಭೇಟಿ: ಸುವ್ಯವಸ್ಥೆ ಕಾಪಾಡಲು ಸೂಚನೆ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪೊಲೀಸ್ ಠಾಣಾ ಸಿಪಿಐ ಕಚೇರಿಗೆ ಇಂದು ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಭೇಟಿ ನೀಡಿ ಗಣೇಶಮೂರ್ತಿಗಳ ವಿಸರ್ಜನೆ ವೇಳೆ ಸೌಹಾರ್ದತೆಯಿಂದಿರಬೇಕೆಂದು ತಿಳಿಸಿದರು. ಸಿರುಗುಪ್ಪ ನಗರವು ಸೂಕ್ಷ್ಮವಾಗಿದ್ದು ಜನತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಕೋರಿದ್ದಾರೆ.
ಗಣೇಶಮೂರ್ತಿಗಳ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಯಾವುದೇ ಕಿಡಿಗೇಡಿಗಳ ಮಾತಿಗೆ ಕಿವಿಗೊಡದೆ ಸೌಹಾರ್ದತೆಯಿಂದಿರಬೇಕು. ಒಂದು ವೇಳೆ, ಇಲಾಖೆ ಕಾನೂನು ಕ್ರಮಗಳನ್ನು ಕೈಗೊಂಡರೆ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗುತ್ತದೆಯೆಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಗಣೇಶೋತ್ಸವ ಎಲ್ಲೆಡೆ ಶಾಂತಿಯುತವಾಗಿ ಆಚರಣೆಯಾಗಿದೆ, ಕೆಲವೆಡೆ ನಿಮಜ್ಜನ ಕಾರ್ಯಗಳು ಮುಗಿದಿವೆ. ಮುಂದಿನ ದಿನಗಳಲ್ಲಿ ನಿಮಜ್ಜನ ಮಾಡುವ ಗಣೇಶ ಮಂಡಳಿಗಳು ಕೂಡ ಶಾಂತಿ ಕಾಪಾಡಿಕೊಳ್ಳಬೇಕು. ನಾವೆಲ್ಲರೂ ಭಾರತೀಯರು, ನಮಗೆಲ್ಲ ಒಂದೇ ಭಾಷೆ, ಸಂವಿಧಾನ ಎಂದು ತಿಳಿಸಿದರು. ಈ ವೇಳೆ ,ಡಿವೈಎಸ್ಪಿ ಅರುಣಕುಮಾರ್, ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ತೆಕ್ಕಲಕೋಟೆ ಸಿಪಿಐ ಹಸೇನ್ ಸಾಬ್, ಸಿರುಗುಪ್ಪ ಠಾಣೆಯ ಪಿಎಸ್ಐ ಹೊಸಕೇರಪ್ಪ ಇದ್ದರು.