ಹಾಸನ: ಕಳೆದ ಸಂಸತ್ ಚುನಾವಣೆಯಲ್ಲಿ ಜಿಲ್ಲಾ ಸಮಿತಿ ಆಯ್ಕೆ ಮಾಡಿದ್ದ ಅಭ್ಯರ್ಥಿಗಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಸೇಡಿನ ರಾಜಕಾರಣ ಮಾಡಿ ನಮ್ಮೆಲ್ಲರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ ನಮ್ಮೆಲ್ಲರ ವಿರುದ್ಧ ಪಿತೂರಿ ಮಾಡಿದವರಿಗೆ ಕಾರ್ಯಕರ್ತರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಅನರ್ಹ ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಹೇಳಿದರು.
ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ: ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಆರೋಪ - ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಹೇಳಿಕೆ
ಕಳೆದ ಸಂಸತ್ ಚುನಾವಣೆಯಲ್ಲಿ ಜಿಲ್ಲಾ ಸಮಿತಿ ಆಯ್ಕೆ ಮಾಡಿದ್ದ ಅಭ್ಯರ್ಥಿಗಳ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಸೇಡಿನ ರಾಜಕಾರಣ ಮಾಡಿ ನಮ್ಮೆಲ್ಲರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ನಮ್ಮೆಲ್ಲರ ವಿರುದ್ಧ ಪಿತೂರಿ ಮಾಡಿದವರ ವಿರುದ್ಧ ಕಾರ್ಯಕರ್ತರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಅನರ್ಹ ಬಿಎಸ್‌ಪಿ ಮುಖಂಡ ಸ್ಟೀಫನ್ ಪ್ರಕಾಶ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಎಸ್‌ಪಿ ಪಕ್ಷ ಸಂಘಟನೆಗೆ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದೇ ಜಿಲ್ಲಾ ಉಸ್ತುವಾರಿ ಗಂಗಾಧರ್ ಅವರು ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿರುವವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯೇ ಇಲ್ಲವಾಗಿದೆ. ಪಕ್ಷದಲ್ಲಿ ಇಲ್ಲದವರಿಗೆ ಸೂಕ್ತ ಸ್ಥಾನ - ಮಾನಗಳನ್ನು ಒದಗಿಸಲಾಗುತ್ತಿದೆ. ಜೆಡಿಎಸ್ ಪರವಾಗಿ ಕೆಲಸ ಮಾಡಿ ಆ ಪಕ್ಷಕ್ಕೆ ಮತ ಹಾಕಿಸಿದವರಿಗೆ ಉಸ್ತುವಾರಿಗಳನ್ನಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಕಾರ್ಯಕರ್ತರ ಅಭಿಪ್ರಾಯದಂತೆ ಜಿಲ್ಲಾ ಸಮಿತಿ ರಚಿಸುವಂತೆ ಕೇಳಿದ್ದೇವೆ. ಇದು ಹೇಗೆ ಪಕ್ಷ ವಿರೋಧಿ ಚಟುವಟಿಕೆ ಆಗಲು ಸಾಧ್ಯ? ಗಂಗಾಧರ್ ಅವರೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಅವರ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದರು.
TAGGED:
BSP Leader Steephen prakash