ಕರ್ನಾಟಕ

karnataka

ETV Bharat / state

ಹಂಪಿಯಲ್ಲಿ ನಡೆಯುತ್ತಿತ್ತು ವೈಭವದ ನವರಾತ್ರಿ.. ಮೈಸೂರು ದಸರಾಕ್ಕೂ, ಇದಕ್ಕೂ ಇದೆ ನಂಟು !

ವಿಜಯನಗರದ ಅರಸರ ಕಾಲದಲ್ಲಿ ನವರಾತ್ರಿ ದಿನಗಳಲ್ಲಿ ಮಹಾ ರಾಜಧಾನಿ ಹಂಪಿಯಲ್ಲಿ ದಸರಾ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿತ್ತು ಎಂಬುದು ತಿಳಿದುಬಂದಿದೆ.

ಹಂಪಿ
ಹಂಪಿ

By

Published : Sep 29, 2022, 8:41 PM IST

ಬಳ್ಳಾರಿ: ಮೈಸೂರಿನಲ್ಲಿ ನಾಡಹಬ್ಬ ದಸರಾ ವಿಜೃಂಭಣೆಯಿಂದ ಜರುಗುತ್ತಿದೆ. ಒಂಬತ್ತು ದಿನಗಳ ಕಾಲ ಈ ಆಚರಣೆ ನೋಡೋದೆ ಬಲು ಸೊಗಸು. ಇಂಥ ವೈಭವದ ಆಚರಣೆ ಶುರುವಾಗಿದ್ದು ಎಲ್ಲಿ? ವಿಶ್ವಪ್ರಸಿದ್ಧ ಹಂಪಿಗೂ ಮೈಸೂರಿನ ದಸರಾಗೂ ಏನೂ ಸಂಬಂಧ? ಹೌದು ಮೈಸೂರಿನಲ್ಲೀಗ ದಸರಾ ಹಬ್ಬದ ಸಂಭ್ರಮ. ಆದರೆ, ಇದರ ಮೂಲಹಬ್ಬ, ರೂಪುರೇಷೆ, ಅರಸು ಕಾಲದ ಆಚರಣೆಯ ವಿಜೃಂಭಣೆ ಹಂಪಿಯ ವಿಜಯನಗರ ಕಾಲದ ಮುಂದುವರಿದ ಭಾಗವಾಗಿದೆ.

ವಿಜಯನಗರದ ಅರಸರ ಕಾಲದಲ್ಲಿ ನವರಾತ್ರಿ ದಿನಗಳಲ್ಲಿ ಮಹಾ ರಾಜಧಾನಿ ಹಂಪಿಯಲ್ಲಿ ದಸರಾ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿತ್ತು. ದಸರಾ ಹಬ್ಬವನ್ನು ಇಡೀ ಅರಸು ಮನೆಗಳಲ್ಲಿಯೇ ವಿಜಯನಗರದ ಅರಸರು ಹಂಪಿಯಲ್ಲಿ ವಿಶಿಷ್ಟವಾಗಿ ಕಟ್ಟಿಸಿರುವ 'ಮಹಾನವಮಿ ದಿಬ್ಬ’ದಲ್ಲಿ ಜರುಗುತ್ತಿತ್ತು.

ಹತ್ತನೆಯ ದಿನ ನಡೆಯುತ್ತಿದ್ದ 'ಸೇನಾ ಪರಿವೀಕ್ಷಣಾ ಕಾರ್ಯಕ್ರಮವೇ ಇದರ ಪ್ರಮುಖ ಕೇಂದ್ರವಾಗಿತ್ತು. ಇದನ್ನು ಸೇನಾಶಕ್ತಿ, ಸಾರ್ವಭೌಮತ್ವ ಎಂದೇ ಕರೆಯುತ್ತಿದ್ದರು. ವಿಜಯನಗರ ಕಾಲದ ಅರಸರು ನಡೆಸಿಕೊಂಡು ಬರುತ್ತಿದ್ದ ಹತ್ತು ದಿನಗಳ ವಿಜಯದಶಮಿ ಆಚರಣೆಯನ್ನು ಅಷ್ಟೇ ವಿಜೃಂಭಣೆಯಿಂದ ಮುಂದುವರೆಸಿಕೊಂಡು ಬಂದಿದ್ದು ಮೈಸೂರು ರಾಜರು. ಅದು ಈಗಲೂ ಅಷ್ಟೇ ಪ್ರಸಿದ್ಧಿ ಪಡೆದಿರುವುದು ಕಂಡುಬರುತ್ತದೆ.

ಹಂಪಿಯಲ್ಲಿ ನಡೆಯುತ್ತಿದ್ದ ದಸರಾದ ಬಗ್ಗೆ ಪ್ರಾಧ್ಯಾಪಕರು ಮಾತನಾಡಿದ್ದಾರೆ

ವಿಜಯನಗರ ಕಾಲದ ಅರಸರ ಆಳ್ವಿಕೆ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ಈಗಿನ ಇತರ ರಾಜ್ಯಗಳು ಕೂಡ ಇವರ ಒಡೆತನದಲ್ಲಿದ್ದವು. ವಿಜಯನಗರದ ಅರಸರ ಆಳ್ವಿಕೆಯಲ್ಲಿ ಮೈಸೂರು ರಾಜರುಗಳು ಕೂಡ ಸಾಮಂತರಾಗಿದ್ದರು. ಯುದ್ಧದಲ್ಲಿ ವಿಜಯನಗರ ಪತನವಾದ ಮೇಲೆ ಹಂಪಿಯಲ್ಲಿ ನಡೆದುಕೊಂಡು ಬಂದಿದ್ದ ನವರಾತ್ರಿ ವೈಭವ, ವಿಜಯದಶಮಿ ಆಚರಣೆಯನ್ನು ಮೈಸೂರು ಅರಸರು ತಮ್ಮಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲು ಶುರು ಮಾಡಿದರು.

ಮಹಾನವಮಿ ವೈಭವವು ವಿಜಯನಗರದ ಅರಸರ ನಂತರ ಅತ್ಯಂತ ವೈಭವೋಪೇತವಾಗಿ ನಡೆಸಿಕೊಂಡು ಬಂದಿದ್ದು, ಮೈಸೂರು ಅರಸರೇ ಎಂದು ಇತಿಹಾಸಕಾರರು ಹೇಳುತ್ತಾರೆ. ಇಂತಹ ಗತವೈಭವದ ಆಚರಣೆಯನ್ನು ಹಂಪಿಯಲ್ಲಿಯೂ ಮಾಡಬೇಕು ಅನ್ನೋದು ಸ್ಥಳೀಯರ ಅಭಿಪ್ರಾಯ.

ವಿಜಯನಗರ ಕಾಲದಲ್ಲಿ ಶುರುವಾದ ಅದ್ಧೂರಿ ವಿಜಯದಶಮಿ ಸಂಭ್ರಮ ಇದೀಗ ಕೇವಲ ಮೈಸೂರಿಗೆ ಸೀಮಿತವಾಗಿದೆ. ಹಂಪಿಯ ಮಹಾನವಮಿ ದಿಬ್ಬದ ಮೇಲೆ ರಾಜರು ಕೂತು ನೋಡುತ್ತಿದ್ದರು. ಅಂಥ ಪರಂಪರೆಯ ಪ್ರದೇಶದಲ್ಲೀಗ ಎಳ್ಳಷ್ಟು ದಸರಾ ಸಂಭ್ರಮವಿಲ್ಲ. ವಿಜಯನಗರ ಕಾಲದಲ್ಲಿ ನಡೆಯುತ್ತಿದ್ದ ಪರಂಪರೆ ಮುಂದುವರೆಯಬೇಕು. ಕೊನೆ ಪಕ್ಷ ಅದನ್ನು ನೆನಪಿಸುವಂಥ ಕಾರ್ಯಕ್ರಮ ಮಾಡಬೇಕು ಎನ್ನುವುದು ಸ್ಥಳೀಯರ ಅಭಿಲಾಷೆ.

ಓದಿ:ಮೈಸೂರು ದಸರಾ 2022: ಗ್ರಾಮೀಣ ದಸರಾಗೆ ಚಾಲನೆ

ABOUT THE AUTHOR

...view details