ಬಳ್ಳಾರಿ: ಮಹಾನಗರ ಪಾಲಿಕೆ ಆಯುಕ್ತೆಯಾಗಿ ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್ ನೇಮಕಗೊಂಡಿದ್ದಾರೆ. 2016ರ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ಇವರು, ಕಲಬುರಗಿ ಹೆಚ್ಚುವರಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಪ್ರೀತಿ ಗೆಲ್ಹೋಟ್ ನೇಮಕ - ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್ ನೇಮಕಗೊಂಡಿದ್ದಾರೆ.
![ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಪ್ರೀತಿ ಗೆಲ್ಹೋಟ್ ನೇಮಕ IAS officer Preeti Gehlot as Bellary Metropolitan Policy Commissioner](https://etvbharatimages.akamaized.net/etvbharat/prod-images/768-512-9529669-542-9529669-1605231332777.jpg)
ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್
ಮಾಜಿ ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ತುಮಕೂರಿನ ಶಿರಾದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಸ್ತುತಪಡಿಸುತ್ತಿರುವ ನಾಡಗೀತೆ ವೇಳೆ ಪ್ರೋಬೇಷನರಿ ಐಎಎಸ್ ಅಧಿಕಾರಿಯಾಗಿದ್ದ ಪ್ರೀತಿ ಗೆಲ್ಹೋಟ್ ಅವರು ಬಾಯಲ್ಲಿ ಚಿಯಿಂಗ್ ಗಮ್ ಅಗೆಯೋ ಮುಖೇನ ನಾಡಗೀತೆಗೆ ಅಗೌರವ ತೋರಿದ್ದರು. ಅಲ್ಲಿ ಜಿಲ್ಲಾಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದರು.
ಇದೀಗ ಮಹಾನಗರ ಪಾಲಿಕೆ ಆಯುಕ್ತೆಯಾಗಿ ನೇಮಕಗೊಂಡ ಪ್ರೀತಿ ಗೆಲ್ಹೋಟ್ ಅವರು, ಎರಡನೇಯ ಮಹಿಳಾ ಆಯುಕ್ತೆಯಾಗಿ ನೇಮಕ ಗೊಂಡಿರೋದು ವಿಶೇಷ.