ಕರ್ನಾಟಕ

karnataka

ETV Bharat / state

ಭಗವಂತನ ಕೃಪೆಯಿಂದ ಸಚಿವ ಸ್ಥಾನ ಸಿಕ್ಕರೆ ನಿಭಾಯಿಸುವೆ: ಶಾಸಕ ಸೋಮಶೇಖರ ರೆಡ್ಡಿ - ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ

ಸಿಎಂ ಬಿ.ಎಸ್.ಯಡಿಯೂರಪ್ಪನವರು ನೆರೆ ಹಾವಳಿ ಪ್ರದೇಶಕ್ಕೆ ಬೆಂಬಿಡದೇ ಓಡಾಡುತ್ತಿದ್ದಾರೆ. ಅವರಿಗೆ ಬಿಡುವೇ ಇಲ್ಲ. ಸಿಎಂ ಅವರಿಗೆ ಸಚಿವರ ಸಾಥ್ ಅಗತ್ಯವಿತ್ತಾದ್ರೂ, ನೆರೆ ಹಾವಳಿಯ ವೇಳೆ ಸಚಿವ ಸಂಪುಟ ರಚನೆಯಾದ್ರೆ ರಾಜ್ಯದ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ಹಿನ್ನೆಲೆ ಸಂಪುಟ ರಚನೆ ಮಾಡಿಲ್ಲ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ಶಾಸಕ ಸೋಮಶೇಖರ ರೆಡ್ಡಿ

By

Published : Aug 13, 2019, 2:01 PM IST

ಬಳ್ಳಾರಿ: ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆ ಭಗವಂತನ ಕೃಪೆಯಿಂದ ನನಗೆ ಸಚಿವ ಸ್ಥಾನ ಕರುಣಿಸಿದ್ರೆ ನಿಭಾಯಿಸುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯ ಕಪ್ಪಗಲ್ಲು ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿಂದು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ನೆರೆ ಹಾವಳಿಯಿಂದಾಗಿ ಸಚಿವ ಸಂಪುಟ ರಚನೆಯಲ್ಲಿ ವಿಳಂಬ ಆಗುತ್ತಿದೆ. ಆಗಸ್ಟ್ 18 ರಂದು ಸಚಿವ ಸಂಪುಟ ರಚನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೊದಲ ಪಕ್ಷದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರ ಪಕ್ಷದ ಹೈಕಮಾಂಡ್ ಮುಂದಿದೆ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹಾಗೊಂದು ವೇಳೆ ದೊರೆತರೆ ಅದನ್ನ ಸಮರ್ಥವಾಗಿ ನಿಭಾಯಿಸುವೆ ಎಂದರು.

ಶಾಸಕ ಸೋಮಶೇಖರ ರೆಡ್ಡಿ

ಸಿಎಂ ಬಿ.ಎಸ್.ಯಡಿಯೂರಪ್ಪನವರು ನೆರೆ ಹಾವಳಿ ಪ್ರದೇಶಕ್ಕೆ ಬೆಂಬಿಡದೇ ಓಡಾಡುತ್ತಿದ್ದಾರೆ. ಅವರಿಗೆ ಬಿಡುವೇ ಇಲ್ಲ. ಸಿಎಂ ಅವರಿಗೆ ಸಚಿವರ ಸಾಥ್ ಅಗತ್ಯವಿತ್ತಾದ್ರೂ, ನೆರೆ ಹಾವಳಿಯ ವೇಳೆ ಸಚಿವ ಸಂಪುಟ ರಚನೆಯಾದ್ರೆ ರಾಜ್ಯದ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ದಟ್ಟವಾಗಿರೋದರ ಕಾರಣ ಸಂಪುಟ ರಚನೆ ಅಷ್ಟೊಂದು ಸಮಂಜಸವಲ್ಲ ಎಂಬ ಅಭಿಪ್ರಾಯಕ್ಕೆ ಹೈಕಮಾಂಡ್ ಬಂದಿದೆ ಎಂದು ತಿಳಿಸಿದರು.

ಕರುಣಾಕರರೆಡ್ಡಿ ನನ್ನ ಸಹೋದರ:
ರಾಜಕೀಯ ಹೊರತುಪಡಿಸಿ ಗಾಲಿ ಕರುಣಾಕರ ರೆಡ್ಡಿ ಅವರು ನನ್ನ ಸಹೋದರ. ಕೆಲ ಕಾರಣಗಳಿಂದ ಅವರು ನಮ್ಮ ಕುಟುಂಬದಿಂದ ದೂರ ಉಳಿದಿದ್ದರು. ಆದ್ರೆ, ಯಾವುದೇ ವೈಯಕ್ತಿಕ ವೈಮನಸ್ಸುಗಳಿಲ್ಲ. ಅವರಿಗೂ ಸಚಿವ ಸ್ಥಾನ ಸಿಕ್ಕರೆ ನನಗೆ ಸಂತೋಷ. ನಾನಂತೂ ಹೈಕಮಾಂಡ್ ಬಳಿ ಯಾವುದೇ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ. ಶ್ರೀರಾಮುಲು ಕೂಡ ನನ್ನ ಕುಟುಂಬದ ಸದಸ್ಯರು.‌ಅವರಿಗೂ ಸಚಿವ ಸ್ಥಾ‌ನ ದೊರತರೆ ಖುಷಿ ಪಡೋರಲ್ಲಿ ನಾನೊಬ್ಬ ಎಂದು ಹೇಳಿದರು.

ABOUT THE AUTHOR

...view details