ಬಳ್ಳಾರಿ:ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಪ್ರತಿಕ್ರಿಯಿಸಲು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ನಿರಾಕರಿಸಿದ್ದಾರೆ.
ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದಿರೊ ಅವ್ಯವಹಾರ ಕುರಿತ ನನಗೆ ಮಾಹಿತಿ ಇಲ್ಲ: ಸಚಿವ ಬಿ.ಶ್ರೀರಾಮುಲು ಸ್ಪಷ್ಟನೆ - ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು
ಪುಣ್ಯಾಶ್ರಮದಲ್ಲಿ ಯಾವ ರೀತಿಯ ಅವ್ಯವಹಾರ ನಡೆದಿದೆಯೋ ನಾನಂತೂ ತಿಳಿದಿಲ್ಲ. ಕೂಡಲೇ ಟ್ರಸ್ಟ್‌ನ ಸಭೆ ಕರೆದು ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಪರಿಶೀಲನೆ ನಡೆಸಲಾಗುವುದೆಂದು ಸಚಿವ ಶ್ರೀರಾಮುಲು ತಿಳಿಸಿದರು.
ಬಳ್ಳಾರಿ ನಗರದ ಅವಂಬಾವಿ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಯಾವ ರೀತಿಯ ಅವ್ಯವಹಾರ ನಡೆದಿದೆ ಎಂಬುದರ ಕುರಿತು ನನಗಂತೂ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಆ ರೀತಿಯ ವರದಿ ಬಿತ್ತರವಾಗುತ್ತಿರೋದನ್ನ ನಾನು ಸೂಕ್ಷ್ಮವಾಗಿ ಗಮನಿಸಿರುವೆ. ಹೀಗಾಗಿ, ಪುಣ್ಯಾಶ್ರಮ ಟ್ರಸ್ಟ್‌ನ ಅಧ್ಯಕ್ಷನಾಗಿರುವ ನಾನು. ಈ ಉಪಚುನಾವಣೆ ಮುಗಿದ ಬಳಿಕ ಟ್ರಸ್ಟ್ನಲ್ಲಿ ಸಭೆ ಕರೆಯುವೆ. ಯಾವ ರೀತಿಯ ಅವ್ಯವಹಾರ ನಡೆದಿದೆ ಎನ್ನಲಾಗುತ್ತಿದೆ ಅದೆಲ್ಲದರ ಕುರಿತು ಮಾಹಿತಿ ಪಡೆಯೋದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಭಾಗದ ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಪಂಡಿತ್ ಪುಟ್ಟರಾಜ ಕವಿ ಗವಾಯಿ ಅವರ ಆಶಯದಂತೆ ಆ ಪುಣ್ಯಾಶ್ರಮ ಮುನ್ನಡೆಯುತ್ತದೆ. ಪುಟ್ಟರಾಜ ಕವಿ ಗವಾಯಿ ಅವರು ಲಿಂಗೈಕ್ಯರಾದ ಬಳಿಕ, ಕಲ್ಲಯ್ಯಜ್ಜನವರಿಗೆ ಅದರ ಜವಾಬ್ದಾರಿಯನ್ನ ನೀಡಲಾಯಿತು. ಪುಣ್ಯಾಶ್ರಮದ ಜೀರ್ಣೋದ್ಧಾರಕ್ಕಾಗಿ ರಾಜ್ಯ ಸರ್ಕಾರದ ರೊಕ್ಕನೂ ಕೊಡಿಸಲಾಗಿದೆ. ಹೀಗಾಗಿ, ಪುಣ್ಯಾಶ್ರಮದಲ್ಲಿ ಯಾವ ರೀತಿಯ ಅವ್ಯವಹಾರ ನಡೆದಿದೆಯೋ ನಾನಂತೂ ತಿಳಿದಿಲ್ಲ. ಕೂಡಲೇ ಟ್ರಸ್ಟ್‌ನ ಸಭೆ ಕರೆದು ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಪರಿಶೀಲನೆ ನಡೆಸಲಾಗುವುದೆಂದು ಸಚಿವ ಶ್ರೀರಾಮುಲು ತಿಳಿಸಿದರು.