ಕರ್ನಾಟಕ

karnataka

ETV Bharat / state

ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯೇ: ಶಾಸಕ ಕರುಣಾಕರ ರೆಡ್ಡಿ - Demand for Harapanahalli District

ನಾವು ಆಶಾವಾದಿಗಳಾಗಿರಬೇಕಷ್ಟೇ. ಅಂತಿಮ ತೀರ್ಮಾನ ಮಾಡೋದು ಹೈಕಮಾಂಡ್ ಎಂದು ತಮ್ಮ ಸಚಿವ ಸ್ಥಾನದ ಆಕಾಂಕ್ಷೆಯನ್ನು ಶಾಸಕ ಕರುಣಾಕರ ರೆಡ್ಡಿ ಹೊರಹಾಕಿದರು.

ಶಾಸಕ ಕರುಣಾಕರರೆಡ್ಡಿ,  I am also aspirat for Minister post: Karunakara Reddy
ಶಾಸಕ ಕರುಣಾಕರರೆಡ್ಡಿ

By

Published : Dec 19, 2019, 5:30 PM IST

ಬಳ್ಳಾರಿ: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಹರಪನಹಳ್ಳಿಯ ಶಾಸಕ ಕರುಣಾಕರ ರೆಡ್ಡಿ ಹೇಳಿದರು.

ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸೂರು‌ ಕಲ್ಪಿಸುವ ಸಲುವಾಗಿ ಆಯೋಜಿಸಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು, ನಾವು ಆಶಾವಾದಿಗಳಾಗಿರಬೇಕಷ್ಟೇ. ಅಂತಿಮ ತೀರ್ಮಾನ ಮಾಡೋದು ಹೈಕಮಾಂಡ್ ಮಾತ್ರ ಎಂದರು.

ಶಾಸಕ ಕರುಣಾಕರ ರೆಡ್ಡಿ

ಹರಪನಹಳ್ಳಿ ಜಿಲ್ಲೆಗಾಗಿ ಬೇಡಿಕೆ:
ಹರಪನಹಳ್ಳಿ ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚನೆ ಮಾಡಬೇಕೆಂಬುದು ಆ ಭಾಗದ ಜನರ ಕೂಗು. ಹೀಗಾಗಿ, ಮುಖ್ಯಮಂತ್ರಿ ಬಿಎಸ್​ವೈ ಅವರ ಮುಂದೆ ಈ ಬೇಡಿಕೆಯನ್ನು ಕಳೆದ ಸಭೆಯಲ್ಲಿ ಇಡಲಾಗಿದೆ‌‌. ಆದರೆ, ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಯ ಕುರಿತು ಡಿಸೆಂಬರ್ ತಿಂಗಳಲ್ಲಿ ಮತ್ತೊಂದು ಸಭೆ ಕರೆಯಲು ನಿರ್ಧರಿಸಲಾಗಿತ್ತು. ಆ ಸಭೆಯನ್ನು ಯಾವಾಗ ನಡೆಸಲಾಗುತ್ತದೆ ಎಂಬದನ್ನು ಕಾದುನೋಡೋಣ ಎಂದು ತಿಳಿಸಿದರು.

ABOUT THE AUTHOR

...view details