ಬಳ್ಳಾರಿ:ಬಳ್ಳಾರಿಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಪಾದಚಾರಿ ರಸ್ತೆಯ ಮೇಲೆ ನೆಲೆಸಿದ್ದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಹಸಿವಿನಿಂದ ಬಳಲಿ ಸಾವನ್ನಪ್ಪಿದ್ದಾನೆ.
ಹೈದರಾಬಾದ್ನ ಕರೀದಬಾದ್ ಏರಿಯಾದ ಅಶ್ವಿನ್ ಕುಮಾರ (41) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಊಟವಿಲ್ಲದೇ ಬಳಲುತ್ತಿದ್ದ ಈತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 15 ರಂದು ಸಾವನ್ನಪ್ಪಿದ್ದಾನೆಂದು ವಿಮ್ಸ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.