ಕರ್ನಾಟಕ

karnataka

ETV Bharat / state

ಕೊರೊನಾ ಟೆಸ್ಟ್​ ನೆಪ ಹೇಳಿ ಕರೆತಂದ: ನಂಬಿ ಬಂದ ಹೆಂಡ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿದ ಗಂಡ - bellari corona update

ಕೊರೊನಾ ಟೆಸ್ಟ್ ನೆಪದಲ್ಲಿ ಕರೆತಂದು ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ. ಬಳ್ಳಾರಿಯಲ್ಲಿ ಈ ಘಟನೆ ನಡೆದಿದೆ.

kill
kill

By

Published : May 4, 2021, 3:05 AM IST


ಬಳ್ಳಾರಿ: ಕೋವಿಡ್ ಟೆಸ್ಟ್ ಮಾಡಿಸಲೆಂದೇ ಪತ್ನಿಯನ್ನು ಕರೆದೊಯ್ದ ಪತಿ, ಬಳಿಕ ಆಕೆಯನ್ನು ಕೊಲೆ ಮಾಡಿರುವ ಘಟನೆ ಭಾನುವಾರ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಬಳ್ಳಾರಿ ನಗರದ ತಾಳೂರು ರಸ್ತೆಯ ನಿವಾಸಿ ಮಸ್ತಾನ್ ರೆಡ್ಡಿ ಎಂಬಾತ ತನ್ನ ಪತ್ನಿ ಧನ ಲಕ್ಷ್ಮಿ (38) ಅವರನ್ನು ಕೊಲೆ ಮಾಡಿದ್ದಾನೆ.

ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರೋಣ ಬಾ ಎಂದು ಪತ್ನಿಯನ್ನು ನಗರದ ಟಿ.ಬಿ‌.ಸ್ಯಾನಿ ಟೋರಿಯಂ ಬಳಿ ಹೊಸದಾಗಿ ನಿರ್ಮಿಸುತ್ತಿರುವ ಲೇಹೌಟ್ ಬಳಿ‌ ಕರೆತಂದಿದ್ದಾನೆ. ಬಳಿಕ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

ಮೂತ್ರ ವಿಸರ್ಜನೆ ಮಾಡಲು ಹೋದಾಗ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಅವರಿಬ್ಬರ ನಡುವಿನ ದಾಂಪತ್ಯದಲ್ಲಿ ಬಿರುಕಿತ್ತು. ಹಾಗಾಗಿ, ಈ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.

ಕೊಲೆಗೈದ ಆರೋಪಿ ಮಸ್ತಾನ್ ರೆಡ್ಡಿಯನ್ನ ಕೌಲ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ದಂಪತಿಗಳಿಗೆ ಓರ್ವ ಮಗ, ಪುತ್ರಿ ಇದ್ದಾರೆ.


ABOUT THE AUTHOR

...view details