ಹೊಸಪೇಟೆ: ವಿವಾಹೇತರ ಸಂಬಂಧ ವಿಚಾರವಾಗಿ ಪತಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆಗೈದಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ವಿವಾಹೇತರ ಸಂಬಂಧ: ಪತ್ನಿ-ಪ್ರಿಯಕರನನ್ನು ಕೊಂದ ಪತಿ! - ಅನೈತಿಕ ಸಂಬಂಧ ವಿಚಾರ
ಅನೈತಿಕ ಸಂಬಂಧ ವಿಚಾರವಾಗಿ ಪತಿ ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ.
![ವಿವಾಹೇತರ ಸಂಬಂಧ: ಪತ್ನಿ-ಪ್ರಿಯಕರನನ್ನು ಕೊಂದ ಪತಿ! Husband killed wife and her lover of immoral relationship](https://etvbharatimages.akamaized.net/etvbharat/prod-images/768-512-10476610-thumbnail-3x2-nin.jpg)
ಗ್ರಾಮದ ತಬಸಮ್ (28) ಹಾಗೂ ಆಕೆಯ ಪ್ರಿಯಕರ ಫಯಾಜ್ ಅಹಮದ್ (26) ಕೊಲೆಯಾಗಿರುವವರು. ತಬಸಮ್ ಗಂಡ ಜಹಾಂಗೀರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಸಂತ ವಿ.ಅಸೂದೆ ಹಾಗೂ ಪಿಎಸ್ಐ ತಿಮ್ಮಣ್ಣ ಚಾಮನೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ನಿ ಹಾಗೂ ಮಕ್ಕಳು ಜನವರಿ 6ರಂದು ಗ್ರಾಮದಲ್ಲಿನ ಮನೆ ಬಿಟ್ಟು ಹೋಗಿದ್ದಾರೆಂದು ಪತಿ ಜಹಾಂಗೀರ್ ಜನವರಿ 15ರಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ತಬಸಮ್ ಹಾಗೂ ಜಹಾಂಗೀರ್ ಏಳು ವರ್ಷದ ಹಿಂದೆ ವಿವಾಹವಾಗಿದ್ರು. ಇವರಿಗೆ ಮೂವರು ಮಕ್ಕಳಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.