ಬಳ್ಳಾರಿ:ಬೆಂಗಳೂರಿನಿಂದ ಹೊಸಪೇಟೆ ನಗರದ ಬಸ್ ನಿಲ್ದಾಣಕ್ಕೆ ತಡರಾತ್ರಿ ನೂರಾರು ಪ್ರಯಾಣಿಕರು ಬಂದಿಳಿದಿದ್ದು, ತಮ್ಮ ಊರುಗಳಿಗೆ ಹೊರಡಲು ಬಸ್ ವ್ಯವಸ್ಥೆಯಿಲ್ಲದೇ ಇಡೀ ರಾತ್ರಿ ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು. ಹೈದರಾಬಾದ್, ತೆಲಂಗಾಣ, ಛತ್ತೀಸ್ಘಡ ಹಾಗೂ ವಿಜಯಪುರ ಮೂಲದ ಕಾರ್ಮಿಕರು ತಮ್ಮ ಕುಟುಂಬಗಳ ಜೊತೆ ಪರದಾಡುವಂತಾಯಿತು. ತಮ್ಮ ಊರಿಗಳಿಗೆ ಬಸ್ಗಳು ಹೊರಡಲು ಬೆಳಗ್ಗೆಯವರೆಗೆ ಕಾಯಬೇಕಾಯಿತು. ಬಸ್ ನಿಲ್ದಾಣದಲ್ಲಿ ಮಲಗಲು ವ್ಯವಸ್ಥೆಯಿಲ್ಲದೆ, ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಬಂದ ಜನರು ಪರದಾಡುವಂತಾಯಿತು.
ಹೊಸಪೇಟೆ ಬಸ್ ನಿಲ್ದಾಣದಲ್ಲಿ ಇಡೀ ರಾತ್ರಿ ಪ್ರಯಾಣಿಕರ ಪರದಾಟ: ಡಿವೈಎಸ್ಪಿಯಿಂದ ಊಟದ ವ್ಯವಸ್ಥೆ - ಹೊಸಪೇಟೆಯ ಡಿವೈಎಸ್ ರಘುಕುಮಾರ್
ಬಸ್ ವ್ಯವಸ್ಥೆಯಿಲ್ಲದೇ ಇಡೀ ರಾತ್ರಿ ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣದಲ್ಲಿಯೇ ನೂರಾರು ಜನರು ಕಾಲ ಕಳೆಯುವಂತಾಯಿತು. ಪೊಲೀಸ್ ಅಧಿಕಾರಿಗಳು ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡಿದರು.
ಹೊಸಪೇಟೆ ಬಸ್ನಿಲ್ದಾಣದಲ್ಲಿ ರಾತ್ರಿಯಿಡಿ ಕಾಲ ಕಳೆದ ನೂರಾರು ಪ್ರಯಾಣಿಕರು
ಕೆಎಸ್ಆರ್ಟಿಸಿ ಡಿಸಿಗೆ ಕರೆ ಮಾಡಿ ಬಸ್ ನಿಲ್ದಾಣದ ಒಳಗಡೆ ಮಲಗಲು ವ್ಯವಸ್ಥೆ ಕೇಳಿದರೆ, ಸ್ಕ್ರೀನಿಂಗ್ ನಂತರವೇ ಅವರಿಗೆ ಒಳಗೆ ಪ್ರವೇಶ ಎಂದು ಹೇಳಿದ್ದಾರೆ. ನಂತರ ಸ್ಥಳಕ್ಕೆ ಬಂದ ಹೊಸಪೇಟೆಯ ಡಿವೈಎಸ್ಪಿ ರಘುಕುಮಾರ್, ಬಸ್ ನಿಲ್ದಾಣದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಬಸ್ ನಿಲ್ದಾಣದ ಹೊರಗಿದ್ದ ಕಾರ್ಮಿಕರಿಗೆ ಒಳಗಡೆ ಮಲಗಲು ಅವಕಾಶ ಮಾಡಿಕೊಟ್ಟರು. ಅಲ್ಲದೆ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿದರು.