ಕರ್ನಾಟಕ

karnataka

ETV Bharat / state

ಗುಡ್ ಫ್ರೈಡೇ: ಯೇಸುವಿನ ಮೊರೆ ಹೋದ ಗಣಿನಾಡ ಭಕ್ತರು - undefined

ಮೇರಿ ಮಾತಾ ಚರ್ಚ್ ಮೂಲಕ ಪ್ರಾರಂಭವಾದ ಯೇಸುವಿನ ಮೂರ್ತಿಯ ಮೆರವಣಿಗೆ ನಗರದ್ಯಾಂತ ಸಾಗಿತು. ಈ ಸಮಯದಲ್ಲಿ ನೂರಾರು ಭಕ್ತರು ಕೈಯಲ್ಲಿ ಯೇಸುವಿನ ಚಿಕ್ಕ ಶಿಲುಬೆಯನ್ನು ಹಿಡಿದು ಸರತಿ ಸಾಲಿನಲ್ಲಿ ಹೆಜ್ಜೆ ಹಾಕುತ್ತಾ ಮುಖ್ಯ ಚರ್ಚ್ ಕಡೆ ಹೊರಟರು

ಗಣಿನಾಡಲ್ಲಿ ಗುಡ್ ಫ್ರೈಡೇ ಆಚರಣೆ

By

Published : Apr 20, 2019, 9:32 AM IST

Updated : Apr 20, 2019, 8:02 PM IST

ಬಳ್ಳಾರಿ : ಗಣಿನಾಡಲ್ಲಿ ಗುಡ್ ಫ್ರೈಡೇ ದಿನಾಚರಣೆ ಪ್ರಯುಕ್ತ ನೂರಾರು ಯೇಸುವಿನ ಭಕ್ತರು ಭಾಗವಹಿಸಿ ಯೇಸುವಿನ ಕೃಪೆಗೆ ಪಾತ್ರರಾದರು. ಇಂದಿರಾನಗರದ ಮುಂಭಾಗದಲ್ಲಿನ ಮುಖ್ಯ ಕ್ರೈಸ್ತ ಚರ್ಚ್​ನಲ್ಲಿ ನಿನ್ನೆ ಸಂಜೆ ನಡೆದ ಗುಡ್ ಫ್ರೈಡೇ ದಿನಾಚರಣೆ ಪ್ರಯುಕ್ತ ನೂರಾರು ಯೇಸುವಿನ ಭಕ್ತರು ಭಾಗವಹಿಸಿ ಯೇಸುವಿನ ಕೃಪೆಗೆ ಪಾತ್ರರಾದರು.

ಯೇಸುವಿನ ಮೊರೆ ಹೋದ ಗಣಿನಾಡ ಭಕ್ತರು

ಒಪಿಡಿ ಬಳಿ ಇರುವ ಮೇರಿ ಮಾತಾ ಚರ್ಚ್ ಮೂಲಕ ಪ್ರಾರಂಭವಾದ ಯೇಸುವಿನ ಮೂರ್ತಿಯ ಮೆರವಣಿಗೆ ನಗರದ್ಯಾಂತ ಸಾಗಿತು. ಈ ಸಮಯದಲ್ಲಿ ನೂರಾರು ಭಕ್ತರು ಕೈಯಲ್ಲಿ ಯೇಸುವಿನ ಚಿಕ್ಕ ಶಿಲುಬೆಯನ್ನು ಹಿಡಿದು ಸರತಿ ಸಾಲಿನಲ್ಲಿ ಹೆಜ್ಜೆ ಹಾಕುತ್ತಾ ಮುಖ್ಯ ಚರ್ಚ್ ಕಡೆ ಹೊರಟರು.

ಈ ಟಿವಿ ಭಾರತ್ ನೊಂದಿಗೆ ಮಾತನಾಡಿದ ಆರೋಗ್ಯ ಮಾತಾ ಚರ್ಚ್​​ ನಿರ್ದೇಶಕ ಫಾದರ್ ಜ್ಞಾನಪ್ರಕಾಶ್​, ಗುಡ್ ಫ್ರೈಡೇ ಎನ್ನುವುದು ಅತಿ ಪವಿತ್ರವಾದ ದಿನಾಚರಣೆ, ಅದು ಕ್ರೈಸ್ತ ಭಕ್ತಾಧಿಗಳಿಗೆ ಎಂದರು. ಗುಡ್ ಫ್ರೈಡೇ ದಿನ ಬಳ್ಳಾರಿಯಲ್ಲಿ ಬಿಸಿಲಿನ ತಾಪ ಹೆಚ್ಚು ಇರುವ ಕಾರಣ ಮಜ್ಜಿಗೆಯನ್ನು ಭಕ್ತರಿಗೆ ವಿತರಣೆ ಮಾಡಲಾಯಿತು.

ಒಟ್ಟಾರೆಯಾಗಿ ಈ ಬಾರಿ ಗಣಿನಾಡು ಬಳ್ಳಾರಿಯಲ್ಲಿ ಮೊದಲನೇ ಬಾರಿಗೆ ಯೇಸುವಿ ಶಿಲುಬೆ ಮಾಡಿ ಅದರ ಮೂಲಕ ಗುಡ್ ಫ್ರೈಡೇ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

Last Updated : Apr 20, 2019, 8:02 PM IST

For All Latest Updates

TAGGED:

ABOUT THE AUTHOR

...view details