ಬಳ್ಳಾರಿ:ಹೈದರಾಬಾದ್ನ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಇಲ್ಲದಿದ್ದರೆ ದೇಶಾದ್ಯಂತ ಉಗ್ರಹೋರಾಟ ಮಾಡುತ್ತೇವೆ ಎಂದು ಎಬಿವಿಪಿ ಬಳ್ಳಾರಿಯ ಜಿಲ್ಲಾ ಕಾರ್ಯದರ್ಶಿ ಯುವರಾಜ್ ಎಚ್ಚರಿಕೆ ನೀಡಿದ್ದಾರೆ.
ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗದಿದ್ದ ದೇಶದ್ಯಾಂತ ಹೋರಾಟ: ಯುವರಾಜ್ ನಗರದ ಹೊರವಲಯದ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಾಲಕಿಯರ ವಸತಿ ಗೃಹದ ಆವರಣದಲ್ಲಿ ನಿನ್ನ ರಾತ್ರಿ ಹೈದರಾಬಾದ್ನ ಪಶುವೈದ್ಯೆ ಆತ್ಮಕ್ಕೆ ಶಾಂತಿ ಸಿಗಲೆಂದು ವಿದ್ಯಾರ್ಥಿನಿಯರು ದೀಪಗಳನ್ನು ಹಚ್ಚುವ ಮೂಲಕ ನಮನ ಸಲ್ಲಿಸಿದರು.
ಎಬಿವಿಪಿ ಬಳ್ಳಾರಿಯ ಜಿಲ್ಲಾ ಕಾರ್ಯದರ್ಶಿ ಯುವರಾಜ್ ಮಾತನಾಡಿ, ಇಂತ ನೀಚ ಕೃತ್ಯ ಎಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಇಲ್ಲದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ಮಾಡುತ್ತವೆ ಎಂದು ಎಚ್ಚರಿಕೆಯ ಮಾತನ್ನಾಡಿದರು.
ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗದಿದ್ದ ದೇಶದ್ಯಾಂತ ಹೋರಾಟ: ಯುವರಾಜ್ ನಂತರ ಮಾತನಾಡಿದ ಎಂ. ಕಾಂ ವಿದ್ಯಾರ್ಥಿನಿ ನರ್ಫಿನ್ ನಮ್ಮ ದೇಶದಲ್ಲಿ ಯುವತಿಯರು, ಮಹಿಳೆಯರು ಮತ್ತು ಮಕ್ಕಳ ಮೇಲೆ ರೇಪ್, ಕೊಲೆ ಪ್ರಕರಣಗಳು ಕಳೆದ ಎರಡು ವರ್ಷಗಳಿಂದ ಯಥೇಚ್ಚವಾಗಿ ನಡೆಯುತ್ತಿವೆ. ಆದರೆ, ಅದಕ್ಕೆ ಸೂಕ್ತ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇನ್ನಾದರೂ ವೈದ್ಯೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಮತ್ತು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.