ಕರ್ನಾಟಕ

karnataka

ETV Bharat / state

ನಾಳೆ ಫ್ರೀಡಂ ಪಾರ್ಕ್​ನಲ್ಲಿ ರೈತ ವಿರೋಧಿ ಕಾಯಿದೆಗಳನ್ನ ವಿರೋಧಿಸಿ ಕಾಂಗ್ರೆಸ್‌ನಿಂದ ಬೃಹತ್ ಸಮಾವೇಶ - Convention on Anti-Farmer Act at

ರಾಜ್ಯದ ಹಿರಿಯ ಮುಖಂಡರೆಲ್ಲರೂ ಒಗ್ಗೂಡಿ ಈ ಮೂರು ಕಾಯಿದೆಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಫ್ರೀಡಂ ಪಾರ್ಕ್​ನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಬೃಹತ್ ರೈತರ ಅಧಿಕಾರ ದಿನವನ್ನ ಆಚರಿಸಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು, ಜನಪ್ರತಿನಿಧಿಗಳು ಸಮಾವೇಶದಲ್ಲಿ ಸೇರಲಿದ್ದಾರೆ..

ಜಯಚಂದ್ರ
ಜಯಚಂದ್ರ

By

Published : Jan 19, 2021, 6:18 PM IST

ಬಳ್ಳಾರಿ :ಮಾರಕಕೃಷಿ ಕಾಯ್ದೆಗಳ ಬಗ್ಗೆರೈತಾಪಿ ವರ್ಗದಲ್ಲಿ ಜಾಗೃತಿ ಮೂಡಿಸಲು ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಜಯಚಂದ್ರ ಹೇಳಿದರು.‌

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎಪಿಎಂಸಿ ಹಾಗೂ ಭೂಸುಧಾರಣಾ ಕಾಯಿದೆಗಳು ರೈತ ವಿರೋಧಿಯಾಗಿವೆ. ಈ ಕಾಯಿದೆಗಳು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಮಾರಕವಾಗಿವೆ. ಸಕಾಲದಲ್ಲಿ ಮಳೆಯಾಗದ ಕಾರಣ, ಕೃಷಿಯಿಂದ ವಿಮುಖರಾಗುವ ಈ ಕಾಲಘಟ್ಟದಲ್ಲಿ ಇಂತಹ ಕಾಯಿದೆಗಳು ರೈತರಿಗೆ ಮಾರಕವಾಗಿವೆ ಎಂದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಜಯಚಂದ್ರ

ಉದ್ಯೋಗವನ್ನರಸಿ ಕೃಷಿ ಕ್ಷೇತ್ರದಿಂದ ವಿಮುಖರಾಗಿ ದೂರದ ಮಹಾನಗರಗಳಿಗೆ ಹೋಗ್ತಾ ಇರೋದು ಸರ್ವೇ ಸಾಮಾನ್ಯವಾಗಿದೆ.‌ ಆದರೆ, ವಾಪಸ್ ಬಂದ್ರೂ ಕೂಡ ಕೃಷಿ ಕ್ಷೇತ್ರ ಮತ್ತೆ ಅವರನ್ನು ಕೈಹಿಡಿಯಲಿದೆ. ಹೀಗಾಗಿ, ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡೋದು ತರವಲ್ಲ. ಇಂತಹ ಕಾಯಿದೆಗಳ ಬಗ್ಗೆ ರೈತಾಪಿ ವರ್ಗದವರಲ್ಲಿ ಜಾಗೃತಿ ಮೂಡಿಸಲು ನಾಳೆ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.‌

ರಾಜ್ಯದ ಹಿರಿಯ ಮುಖಂಡರೆಲ್ಲರೂ ಒಗ್ಗೂಡಿ ಈ ಮೂರು ಕಾಯಿದೆಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಫ್ರೀಡಂ ಪಾರ್ಕ್​ನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಬೃಹತ್ ರೈತರ ಅಧಿಕಾರ ದಿನವನ್ನ ಆಚರಿಸಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು, ಜನಪ್ರತಿನಿಧಿಗಳು ಸಮಾವೇಶದಲ್ಲಿ ಸೇರಲಿದ್ದಾರೆ ಎಂದು ಮಾಜಿ ಸಚಿವ ಜಯಚಂದ್ರ ಹೇಳಿದರು.

ABOUT THE AUTHOR

...view details