ಹೊಸಪೇಟೆ :ನಗರದ ಹುಡಾ ಕಚೇರಿ ಆವರಣದಲ್ಲಿ 1.15 ಕೋಟಿ ರೂ.ವೆಚ್ಚದ ಕಾಮಗಾರಿಗೆ ಹುಡಾ ಅಧ್ಯಕ್ಷ ಅಶೋಕ ಜೀರೆ ಭೂಮಿ ಪೂಜೆ ನೆರವೇರಿಸಿದರು.
ಹೊಸಪೇಟೆ: 1.15 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ - Hosapete latest news
ಹೊಸಪೇಟೆಯಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳಿಗೆ ಹುಡಾ ಅಧ್ಯಕ್ಷ ಅಶೋಕ ಜೀರೆ ಭೂಮಿ ಪೂಜೆ ನೆರವೇರಿಸಿದರು.
![ಹೊಸಪೇಟೆ: 1.15 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ Hosapete](https://etvbharatimages.akamaized.net/etvbharat/prod-images/768-512-03:42:39:1601201559-kn-hpt-02-115-crore-worth-of-land-worship-vsl-ka10031-27092020144915-2709f-1601198355-266.jpg)
Hosapete
ನಗರ ವಿವಿಧ ಬಡಾವಣೆಗಳಲ್ಲಿ 33 ಉದ್ಯಾನವನಗಳಿಗೆ ಪೆನ್ಸಿಂಗ್ ಕಾಮಗಾರಿಗೆ (ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಸಿ ನೆಡುವ ಕಾರ್ಯಕ್ರಮ) 98.71 ಲಕ್ಷ ರೂ ಹಾಗೂ ಪ್ರಾಧಿಕಾರ ಕಚೇರಿಯ ಆವರಣ ಸುಂದರೀಕರಣ ಕಾಮಗಾರಿಯನ್ನು 16.87 ಲಕ್ಷ ರೂ.ವೆಚ್ಚದಲ್ಲಿ ಮಾಡಲಾಗುತ್ತಿದೆ.
ಈ ವೇಳೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ಸಚಿವರ ಆಪ್ತಕಾರ್ಯದರ್ಶಿ ಧರ್ಮೇಂದ್ರ ಸಿಂಗ್ ಇನ್ನಿತರರಿದ್ದರು.