ಕರ್ನಾಟಕ

karnataka

ETV Bharat / state

ಸ್ಕಂದಸಿರಿ ಟೌನ್‌ಶಿಪ್​​ಗೆ ಭೂಮಿ ಪೂಜೆ ನೆರವೇರಿಸಿದ ವಸತಿ ಸಚಿವ ಸೋಮಣ್ಣ.. - 2172 ಜಿ+2 ಮಾದರಿಯ ಗುಂಪು ಮನೆ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಭೂಮಿಪೂಜೆ

ಎರಡು, ಮೂರು ಮನೆ ಇದ್ದವರು ಈ ಟೌನ್‌ಶಿಪ್‌ನಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದ್ದರೇ ಅರ್ಜಿ‌ ಹಿಂಪಡೆಯಿರಿ. ಬಡವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಮನೆಗಳನ್ನು ನಿರ್ಮಿಸಿದ ನಂತರ ಅದನ್ನು ಹೆಣ್ಮಕ್ಕಳ ಹೆಸರಿಗೆ ಮಾಡಲಾಗುವುದು. ಈ ಕುರಿತು ಆದೇಶ‌ ಹೊರಡಿಸಲಾಗುವುದು ಎಂದು ವಸತಿ ಸಚಿವರು ಭರವಸೆ ನೀಡಿದ್ದಾರೆ.

housing-minister-somanna-who-accomplished-land-worship-for-skandasiri-township
ಸ್ಕಂದಸಿರಿ ಟೌನ್ ಶಿಪ್​​ಗೆ ಭೂಮಿ ಪೂಜೆ ನೆರವೇರಿಸಿದ ವಸತಿ ಸಚಿವ ಸೋಮಣ್ಣ

By

Published : Feb 26, 2020, 12:02 PM IST

ಬಳ್ಳಾರಿ :ರಾಜೀವ್ ಗಾಂಧಿ ವಸತಿ‌ ನಿಗಮ ನಿಯಮಿತ, ಜಿಲ್ಲಾಡಳಿತ, ಸಂಡೂರು ಪುರಸಭೆ ಸಂಯುಕ್ತ ಆಶ್ರಮದಲ್ಲಿ ಸಂಡೂರು ಪಟ್ಟಣದ ಕಪ್ಪಲಕುಂಟೆ ರಸ್ತೆಯ ಸ್ಕಂದಸಿರಿ ಟೌನ್‌ಶಿಪ್‌ನಲ್ಲಿ 2172 ಜಿ+2 ಮಾದರಿಯ ಗುಂಪು ಮನೆ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಕಾರ್ಯಕ್ರಮದ ಉದ್ಘಾಟನೆಯಲ್ಲಿ ವಸತಿ ಸಚಿವ ಸೋಮಣ್ಣ

ನಂತರ ಮಾತನಾಡಿದ ಅವರು, ಈ‌ ಮನೆಗಳು ಕಟ್ಟುತ್ತಿರುವುದು ಸೂರಿಲ್ಲದವರಿಗೆ, ದನಿಯಿಲ್ಲದವರಿಗೆ ಮತ್ತು ಅಶಕ್ತರಿಗೆ ಎಂದ ಅವರು, ಮನೆಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜೀ ಪ್ರಶ್ನೆಯೇ ಇಲ್ಲ. ಅತ್ಯುತ್ತಮವಾಗಿ ನಿರ್ಮಿಸಲಾಗುತ್ತಿದೆ ಎಂದರು.

2022ರೊಳಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ 10 ಲಕ್ಷ ಮನೆ ನಿರ್ಮಿಸಿಕೊಡಲು ಉದ್ದೇಶಿಸಲಾಗಿದೆ. ಸೂರುಗಳನ್ನು ಬಡವರಿಗೆ ತಲುಪಿಸುವ ಕೆಲಸವನ್ನು ಪಕ್ಷಾತೀತವಾಗಿ ಮಾಡಲಾಗುವುದು ಎಂದರು. ಎರಡು ಮನೆ, ಮೂರು ಮನೆ ಇದ್ದವರು ಈ ಟೌನ್‌ಶಿಪ್‌ನಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದ್ದರೇ ಅರ್ಜಿ‌ ಹಿಂಪಡೆಯಿರಿ ಎಂದ ಅವರು, ಬಡವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಮನೆಗಳನ್ನು ನಿರ್ಮಿಸಿದ ನಂತರ ಅದನ್ನು ಹೆಣ್ಮಕ್ಕಳ ಹೆಸರಿಗೆ ಮಾಡಲಾಗುವುದು. ಈ ಕುರಿತು ಆದೇಶ‌ ಹೊರಡಿಸಲಾಗುವುದು ಎಂದರು.

ಶಾಸಕ ತುಕಾರಾಂ ಮಾತನಾಡಿ, 135 ಕೋಟಿ ರೂ.ವೆಚ್ಚದಲ್ಲಿ ಸ್ಕಂದಸಿರಿ ಟೌನ್‌ಶಿಪ್‌ 32 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಬಹುದಿನಗಳ ಬೇಡಿಕೆಯನ್ನು ವಸತಿ ಸಚಿವರು ಈಡೇರಿಸಿದ್ದಾರೆ ಎಂದರು.

ABOUT THE AUTHOR

...view details