ಹೊಸಪೇಟೆ: ಕೂಡ್ಲಿಗಿ ತಾಲೂಕಿನಲ್ಲಿ ಸತತ ಮಳೆಯಾಗುತ್ತಿರುವುದರಿಂದ ಮಣ್ಣಿನ ಮನೆಗಳು ಕುಸಿದಿದ್ದು ರೈತರಲ್ಲಿ ಆತಂಕ ಉಂಟು ಮಾಡಿದೆ.
ಸತತ ಮಳೆಗೆ ಕುಸಿದ ಮಣ್ಣಿನ ಮನೆಗಳು: ಆತಂಕದಲ್ಲಿ ರೈತರು - ಮಣ್ಣಿನ ಮನೆ ಕುಸಿತ
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಮಣ್ಣಿನ ಮನೆಗಳು ಕುಸಿದಿದ್ದು, ರೈತರು ಬೆಳೆದ ಬೆಳೆ ಹಾನಿಯಾಗಿದೆ.
ಮನೆ ಕುಸಿತ
ತಾಲೂಕಿನ ಅಮರದೇವರಗುಡ್ಡ ಗ್ರಾಮದ ನಾಗರಾಜ, ಕುಪ್ಪಿನಕೆರೆ ಗ್ರಾಮದ ಈರಣ್ಣ ಸೇರಿದಂತೆ ಇನ್ನಿತರರ ಮನೆಗಳು ಭಾಗಶಃ ಕುಸಿದಿವೆ. ಅಲ್ಲದೆ ಮಳೆ ರೈತರ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ.
ಈಗಾಗಲೇ ಹೈಬ್ರೀಡ್ ಜೋಳ ಕಟಾವಿಗೆ ಬಂದಿದೆ. ಕೆಲ ರೈತರು ಕಟಾವು ಮಾಡಿ ಹೊಲದಲ್ಲಿ ಶೇಖರಿಸಿಟ್ಟಿದ್ದಾರೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜೋಳ ಕಪ್ಪಾಗುವ ಸಾಧ್ಯತೆ ಇದ್ದು, ರೈತರಲ್ಲಿ ಆತಂಕ ಮೂಡಿಸಿದೆ.