ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಬೆಳಗಿನ ಜಾವ ಸುಮಾರು ಮೂರು ಗಂಟೆವರೆಗೂ ಭಾರೀ ಮಳೆ ಸುರಿದಿದ್ದು, ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಒಂದು ಮನೆ ಭಾಗಶಃ ಕುಸಿದು ಬಿದ್ದಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಶಿವಕುಮಾರಗೌಡ ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿಯಲ್ಲಿ ಭಾರೀ ಮಳೆ: ಭಾಗಶಃ ಕುಸಿದ ಮನೆ - ಹಗರಿಬೊಮ್ಮನಹಳ್ಳಿ ಮಳೆ ನ್ಯೂಸ್
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಯೊಂದು ಭಾಗಶಃ ಕುಸಿದುಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಶಿವಕುಮಾರಗೌಡ ತಿಳಿಸಿದ್ದಾರೆ.
Bellary
ನೇಕಾರ ಕಾಲೋನಿಯ ಟಿ.ನಾಗರತ್ನಮ್ಮ ಎಂಬುವರ ಮನೆ ಭಾಗಶಃ ಕುಸಿದುಬಿದ್ದಿದೆ. ಕಳೆದ ವಾರ ಸುರಿದ ಸತತ ಮಳೆಯಿಂದಾಗಿ ಮನೆಪೂರ್ಣ ತೇವಾಂಶದಿಂದ ಕೂಡಿದ್ದು, ಅಡುಗೆ ಕೋಣೆ, ದೇವರಮನೆ ಕುಸಿದಿವೆ.
ಮಳೆ ವರದಿ:
ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ-15.6 ಮಿ.ಮೀ, ಕೋಗಳಿ-14.2 ಮಿ.ಮೀ, ಮಾಲವಿ-13.4 ಮಿ.ಮೀ ಹಾಗೂ ತಂಬ್ರಹಳ್ಳಿ-13.2 ಮಿ.ಮೀ, ಹಗರಿಬೊಮ್ಮನಹಳ್ಳಿ- 15.8 ಮಿ.ಮೀ ನಷ್ಟು ಮಳೆ ಸುರಿದಿದೆ. ಸರಾಸರಿ 14.44 ಮಿ.ಮೀ.ನಷ್ಟು ಮಳೆಯಾಗಿದೆ.