ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲೆ ವಿಭಜನೆ ವಿರುದ್ದದ ಹೋರಾಟಕ್ಕೆ ಹೋಟೆಲ್‌ ಮಾಲೀಕರ ಸಂಘ ಸಾಥ್​ - ಬಳ್ಳಾರಿ

ಬಳ್ಳಾರಿ ಜಿಲ್ಲೆಯ ವಿಭಜನೆ ಖಂಡಿಸಿರುವ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಪ್ರತಿಭಟನೆ ಕೈಗೊಂಡಿದ್ದು, ಇದಕ್ಕೆ ಜಿಲ್ಲಾ ಹೋಟೆಲ್​ ಮಾಲೀಕರ ಸಂಘ ಸಾಥ್​ ನೀಡಿದೆ.

Hotel Owners Association Joined
ಹೋರಾಟಕ್ಕೆ ಸಾಥ್​ ನೀಡಿದ ಹೋಟೆಲ್​​ ಮಾಲೀಕರ ಸಂಘ

By

Published : Dec 26, 2020, 3:01 PM IST

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯು ಇಂದಿಗೆ 13ನೇ ದಿನಕ್ಕೆ ಕಾಲಿರಿಸಿದ್ದು, ಹೋಟೆಲ್ ‌ಮಾಲೀಕರ ಸಂಘ ಹಾಗೂ ಇನ್ನಿತರ ಸಮಿತಿಗಳು ಕೈ ಜೋಡಿಸಿವೆ.

ಹೋರಾಟಕ್ಕೆ ಸಾಥ್​ ನೀಡಿದ ಹೋಟೆಲ್​​ ಮಾಲೀಕರ ಸಂಘ

ನಗರದ ಡಿಸಿ ಕಚೇರಿ ಎದುರು ಸ್ಥಾಪಿಸಲಾದ ತಾತ್ಕಾಲಿಕ ಟೆಂಟ್ ನಲ್ಲಿ ನಾನಾ ಸಂಘಟನೆಗಳಾದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಹತ್ತಿ ವ್ಯಾಪಾರಸ್ಥರ ಸಂಘ ಹಾಗೂ ದಲ್ಲಾಳಿ ವರ್ತಕರ ಸಂಘ, ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟ ನಾಶಕ ಮಾರಾಟಗಾರರ ಸಂಘದ ಮುಖಂಡರು ಪಾಲ್ಗೊಂಡು ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಳಿಕ, ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details