ಹೊಸಪೇಟೆ (ವಿಜಯನಗರ): ಕಾಶ್ಮೀರದಲ್ಲಿ ಅಧಿಕ ಹಿಮಪಾತ ಉಂಟಾದ ಕಾರಣ ಲಾಡ್ಜ್ನಿಂದ ಹೊರ ಬರಲಾಗದೆ ಹೊಸಪೇಟೆ ನಿವಾಸಿಗಳು ಪರದಾಡುತ್ತಿದ್ದಾರೆ.
ನಗರದ ಪ್ರಕಾಶ್ ಮೆಹರವಾಡೆ ಕುಟುಂಬ ಹಾಗೂ ಹುಬ್ಬಳ್ಳಿ ಮೂಲದವರು ಸೇರಿದಂತೆ 10 ಜನರು ಲಾಡ್ಜ್ನಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಲಾಡ್ಜ್ನಲ್ಲಿ ಸಿಲುಕಿರುವ ಹೊಸಪೇಟೆ ನಿವಾಸಿಗಳು ಪ್ರವಾಸದ ಸಮಯದಲ್ಲಿ ಹಿಮಪಾತ ಉಂಟಾಗಿರುವ ಹಿನ್ನೆಲೆ ಅಲ್ಲಿಂದ ಎಲ್ಲಿಗೂ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇನ್ನೂ ಕೆಲ ದಿನಗಳವರೆಗೆ ಹಿಮಪಾತ ಮುಂದುವರೆಯುವ ಸಾಧ್ಯತೆ ಇದ್ದು, ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಈ ಕುರಿತು ಲಾಡ್ಜ್ನಲ್ಲಿ ಸಿಲುಕಿರುವವರೊಬ್ಬರು ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಹಂಪಿಯಲ್ಲಿ ಐತಿಹಾಸಿಕ ಕೋಟೆ ಗೋಡೆ ಕುಸಿತ : ತಪ್ಪಿದ ಭಾರೀ ಅನಾಹುತ